Focus News 18

Athani - ಸಿಡಿಲು ಬಡಿದು ಕೋಹಳ್ಳಿಯಲ್ಲಿ ಯುವಕ ಸಾವು

 *ಕೋಹಳ್ಳಿ :* ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಕೇಸ್ಕರದಡ್ಡಿ ವ್ಯಾಪ್ತಿಯಲ್ಲಿ ವಾಸವಿದ್ದ ಅಮೂಲ ಜಯಸಿಂಗ್ ಕಾನಡೆ (೨೪) ಮಂಗಳವಾರ ಮದ್ಯಾಹ್ನ ಸುರಿದ ಮಳೆಯಲ್ಲಿ ಸಿಡಿಲು ಬಡಿದು ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. 
  *ನಡೆದ ಘಟನೆ* : ಕೋಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕಂದಾಯ ಗ್ರಾಮವಾದ ಕೇಸ್ಕರದಡ್ಡಿ ವಾಸಿಸುತ್ತಿದ್ದ ಜಯಸಿಂಗ್ ಕಾನಡೆ ಇತನ ಹಿರಿಯ ಪುತ್ರ ಅಮೂಲ ಜಯಸಿಂಗ ಕಾನಡೆ ಇತನು ಆಡುಗಳನ್ನು ಮೇಯಿಸಲು ಹೋಗಿದನು. ಇಂದು ಮದ್ಯಾಹ್ನ ೩ ಗಂಟೆಯ ಸುಮಾರಿಗೆ ಸುರಿದ ಗುಡುಗು, ಸಿಡಿಲಿನ ಮಳೆಯಲ್ಲಿ ಹೊಲದಲ್ಲಿದ್ದ ಅಮೂಲ ಕಾನಡೆ ಇತನಿಗೆ ಸಿಡಿಲು ಬಡಿದಿದೆ. ಸಿಡಿಲಿನ ರಭಸಕ್ಕೆ ಸ್ಥಳದಲ್ಲಿಯೇ ಅಮೂಲ‌ ಕಾನಡೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ತೆಲಸಂಗ ಕಂದಾಯ ನಿರೀಕ್ಷಕ ಎಂ. ಎ. ಮುಜಾವರ, ಗ್ರಾಮ ಆಡಳಿತಾಧಿಕಾರಿ ಇರಪಾನ್ ಅಲಗೂರ, ಪಿಡಿಒ ಮಹಾದೇವ ಚೌಧರಿ, ಐಗಳಿ ಪೋಲಿಸ್ ಠಾಣೆಯ ಪಿಎಸ್ ಐ ಶಿವಾಜಿ ಪವಾರ, ಪೇದೆ ಅಕ್ಬರ ಮುಜಾವರ, ಬಸವರಾಜ ಡವಳೇಸ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 
ಪೋಟೋ ೧: ಮೃತ ಯುವಕ‌ ಅಮೂಲ್ ಕಾನಡೆ. 
ಪೋಟೋ ೨ : ಯುವಕನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
*Kohalli:* Amool Jayasingh Kanade (24), who lived in Keskaradadi area of ​​Kohalli village in Athani taluk, died on Tuesday afternoon when he was struck by lightning in the rain.
   *Incident*: Jayasingh Kanade, whose elder son Amul Jayasingh Kanade, who lived in Keskaradaddy, a revenue village under Kohalli Gramam, went to graze goats. Amul Kanade who was in the field during the thunder and lightning shower today around 3 pm, was struck by lightning. Amul Kanade died on the spot due to lightning strike. Telasanga Revenue Inspector M. A. Mujawara, Village Administrator Irapan Alagura, PDO Mahadev Choudhary, PSI Shivaji Pawar of Aigali Police Station, Constable Akbar Mujawara, Basavaraja Davaleswara visited and inspected. A case has been registered at Aigali Police Station. The bereavement of the family members of the young man has reached its peak.
 Photo 1: Deceased youth Amul Kanade.
 Photo 2: The grief of the family members of the young man's loss has reached its peak.


Post a Comment

Previous Post Next Post
Focus News 18

Contact Form