Focus News 18

Badami - ಚಾಲುಕ್ಯರ ಅಧಿದೇವತೆ ನವಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಸುಕ್ಷೇತ್ರ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಜೀ ಕನ್ನಡದ ಮಹರ್ಷಿ ವಾಣಿ ಕಾರ್ಯಕ್ರಮದ ರೂವಾರಿ ಆನಂದ ಗುರೂಜಿ ಇಂದು ಭೇಟಿ ನೀಡಿ ವಿಶೇಷ ಕಾರ್ಯಕ್ರಮ ನಡೆಸಲಾಯಿತು

ಹನ್ನೆರಡು ವರ್ಷಕ್ಕೊಮ್ಮೆ ನೆಡೆಯುವ ಶ್ರೀ ಬನಶಂಕರಿ ಅಮ್ಮನವರ ಪುನರಷ್ಟಬಂಧ ಸಂಪ್ರೋಕ್ಷಣಾ ಕುಂಭಾಭಿಷೇಕ ಮಹೋತ್ಸವಕ್ಕೆ ಬಾದಾಮಿ ಶ್ರೀ ಬನಶಂಕರಿ ಮೂಲಸ್ಥಾನದಿಂದ ಪವಿತ್ರ ತೀರ್ಥ ತರಲು ಜೀ ಕನ್ನಡದ ಮಹರ್ಷಿ ವಾಣಿ ಕಾರ್ಯಕ್ರಮದ ರೂವಾರಿ ಆನಂದ ಗುರೂಜಿ ಹಾಗೂ ಅವರ ಪುತ್ರ ಶರ್ಮಾ ಗುರೂಜಿ ಯವರ ಜೊತೆ ದೇವಾಲಯದ ಅಭಿವೃದ್ಧಿ ಕಮಿಟಿ ಅಧ್ಯಕ್ಷರಾದ ಡಾ:ಎ.ಎಚ್.ಬಸವರಾಜ್ ನೇತೃತ್ವದಲ್ಲಿ , ಪಬ್ಲಿಕ್ ಹ್ಯೂಮನ್ ರೈಟ್ಸ್ ಕಮಿಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಗೌಡರವರು , ಸುಗುಣ ಬಾಲಕೃಷ್ಣ, ಶೋಭಾ ಆಂಜನಪ್ಪ, ವಿಜಯ್ , ಹನುಮಂತರಾಯಪ್ಪರವರು, ರವಿ, ವೆಂಕಟೇಶ್ ಹಾಗೂ ಅರ್ಚಕರು ಮತ್ತು ಆಡಳಿತ ಸಮಿತಿ ಸದಸ್ಯರು ಬಾದಾಮಿ ಸುಕ್ಷೇತ್ರ ಬಾದಾಮಿಗೆ ಆಗಮಿಸಿದರು.

ಜೀ ಕನ್ನಡದ ಮಹರ್ಷಿ ವಾಣಿ ಕಾರ್ಯಕ್ರಮದಿಂದ ಮನೆ ಮಾತಾಗಿರುವ ಶ್ರೀ ಆನಂದ ಗುರೂಜಿ ಇಂದು ಚಾಲುಕ್ಯರ ಅಧಿದೇವತೆ ನವಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಸುಕ್ಷೇತ್ರ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ದೇವಸ್ಥಾನಕ್ಕೆ ಆಗಮಿಸಿದ ಆನಂದ ಗುರೂಜಿ ದೇವಸ್ಥಾನದ ಪುಣ್ಯ ಪುಷ್ಕರಣಿ ಪದ್ಮ ತೀರ್ಥ ಕೊಳದಲ್ಲಿ ಇಳಿದು ಚೊಳಚಗುಡ್ಡ ಪೂಜಾರರಾದ ಉದಯ ಪೂಜಾರ ಅರ್ಚಕರಾದಿಯಾಗಿ ಮಂತ್ರ ಪಠಣಗೈಯುತಾ ಕುಂಭಕ್ಕೆ ನೀರು ತುಂಬಿಕೊಂಡು ದೇವಸ್ಥಾನದ ಪ್ರಾಂಗಣದಲ್ಲಿ ಆನಂದ ಗುರೂಜಿ ಹಾಗೂ ಅವರ ಪುತ್ರ ಶರ್ಮಾ ಗುರೂಜಿ ಹಾಗೂ ಬೆಂಗಳೂರಿನ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷರು ಸರ್ವ ಸದಸ್ಯರೂ ಕೂಡ ಜೊತೆಗೆ ಹೆಜ್ಜೆ ಹಾಕುತ್ತಾ ನಡೆದು, ದೇವಸ್ಥಾನದ ಪ್ರಾಂಗಣದ ನಾಗಪ್ಪ ನ ಪ್ರತಿಮೆಗೆ ಕುಂಬದ ನೀರಿನಿಂದ ವಿಶೇಷ ನಾಗ ಪೂಜೆ ಸಲ್ಲಿಸಿ, ತಾಯಿ ಆದಿಶಕ್ತಿ ನವಶಕ್ತಿ ಜಗನ್ಮಾತೆ ಶಾಖ0ಭರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿ ದೇವಿಯ ಮಹಿಮೆಯನ್ನು ಕೊಂಡಾಡಿದರು.

ಇದೇ ಸಂದರ್ಭದಲ್ಲಿ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಚೇರಮನ್ ಮಲ್ಲಾರಭಟ್. ಶಂಕರಭಟ್ ಪೂಜಾರ ಆನಂದ್ ಗುರೂಜಿಯವರಿಗೆ ಹಾಗೂ ಅವರ ಕುಟುಂಬ ವರ್ಗದವರು ಹಾಗೂ ಬೆಂಗಳೂರು ಬನಶಂಕರಿ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಸೇರಿದಂತೆ ಇವರುಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು. ವ್ಯಕ್ತಪಡಿಸಿದರು.ಚೊಳಚಗುಡ್ಡದ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿಯವರನ್ನು ಹಾಗೂ ಎಲ್ಲಾ ಅರ್ಚಕ ವರ್ಗದವರ ಕಾರ್ಯ ಕ್ಷಮತೆ ಬಗ್ಗೆ ಕೊಂಡಾಡಿ ಜಗನ್ಮಾತೆ ನಿಮ್ಮೆಲ್ಲರನ್ನು ರಕ್ಷಿಸಲಿ,, ನಿಮ್ಮ ಈ ಕಾರ್ಯ ಇಡೀ ರಾಜ್ಯ ಅಷ್ಟೇ ಅಲ್ಲಾ ರಾಷ್ಟ್ರವೇ ಮೆಚ್ಚುವಂತದ್ದು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ದೇವಸ್ಥಾನದ ಪ್ರಾಂಗಣದಲ್ಲಿ ನೆರೆದಿದ್ದ ನೂರಾರು ಭಕ್ತರನ್ನು ಉದ್ದೇಶಿಸಿ ಮಾತನಾಡಿ ಭಕ್ತರ ಸಮಸ್ಯೆಗಳನ್ನು ಆಲಿಸಿ ಉತ್ತರ ಕರ್ನಾಟಕದ ಜನತೆ ಎಂದರೆ ನನಗೆ ಅಚ್ಚುಮೆಚ್ಚು ನೀವು ತೋರಿಸುವ ಪ್ರೀತಿ ವಾತ್ಸಲ್ಯಕ್ಕೆ ನಾನು ಎಂದಿಗೂ ಖುಣಿಯಾಗಿದ್ದೇನೆ ಎಂದು ತಿಳಿಸಿದರು..
ಇದೇ ಸಂದರ್ಭದಲ್ಲಿ ಬೆಂಗಳೂರಿನ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧಕ್ಷರಾದ ಬಸವರಾಜ್. ಎ. ಎಚ್.ಹಾಗೂ ಕೆ. ಪದ್ಮಾ ಕಾರ್ಯನಿರ್ವಾಹಕ ಅಧಿಕಾರಿ ಬೆಂಗಳೂರು, ಮತ್ತು ಬೆಂಗಳೂರಿನ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಸದಸ್ಯರುಗಳು ಮತ್ತು. ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಚೊಳಚಗುಡ್ಡದ ಅರ್ಚಕರು ಇದೇ ಸಂದರ್ಭದಲ್ಲಿ ಹಾಜರಿದ್ದರು.
Public Human Rights Committee State under the leadership of Dr. AH Basavaraj, Chairman of the Temple Development Committee along with Rev. Anand Guruji and his son Sharma Guruji, Revari of Jee Kannada Maharshi Vani Program to bring the sacred tirtha from Badami Shri Banashankari Mulasthana for the Punarashtabandha Samprokshan Kumbhabhishek Mahotsav which is held once in twelve years. General Secretary Chandrasekhar Gowda, Suguna Balakrishna, Shobha Anjanappa, Vijay, Hanumantarayappa, Ravi, Venkatesh and priests and members of the management committee arrived at Badami Sukshetra Badami.

Shri Ananda Guruji, who is popular with Jee Kannada's Maharshi Vani program, today arrived at Badami Sukshetra Sri Banashankari Temple, one of Chalukya's Adhidevata Navashakti Peethas, and offered special pooja.

 Arriving at the temple, Ananda Guruji got down in the Padma Tirtha pond of the temple and chanted mantras as priestess of Cholachagudda Pujara Udaya Pujara filled the kumbha with water. to After performing special Naga Puja with the water of Kumba, Mother Adishakti Navashakti Jaganmata Shakh0bhari performed special Puja and performed Aarti and celebrated the glory of the Goddess.

Mallarabhat, Chairman of Banashankari Temple Trust Committee. Shankarabhat Pujara honored Anand Guruji and his family members and office bearers of Bangalore Banashankari Trust Committee with a shawl. Expressed. He praised the Banashankari Temple Trust Committee of Cholachagudda and all the priestly class for their work capacity. May Mother Goddess protect you all, your work is appreciated by the entire state and the nation.

 Addressing the hundreds of devotees who had gathered in the temple premises and listening to the problems of the devotees, he said that I have always been a victim of the love and affection shown to me by the people of North Karnataka.
 On the same occasion, Basavaraj, the president of the Banashankari Temple Trust Committee of Bangalore. A. H. and K. Padma Executive Officer Bangalore, and members of the Banashankari Temple Trust Committee, Bangalore and. Priests of Banashankari Temple Trust Committee Cholachagudda were present on the occasion.

Post a Comment

Previous Post Next Post
Focus News 18

Contact Form