Focus News 18

Bagalakot - ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ರಿಂದ ಉಚಿತವಾಗಿ ""ದಿ ಕೇರಳ ಸ್ಟೋರಿ"" ಚಲನಚಿತ್ರ ವೀಕ್ಷಣೆ...

ಬಾಗಲಕೋಟೆ ನಗರದ ಚಂದನ ಥಿಯೇಟರ್ ‌ನಲ್ಲಿ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಂದ ‘ದಿ ಕೇರಳ ಸ್ಟೋರಿ’ ಸಿನಿಮಾ ಫ್ರೀ ಶೋ ಆಯೋಜನೆ ಮಾಡಲಾಗಿದೆ. ಮೇ 23ರಿಂದ ಮೇ 25ರ ವರೆಗೆ ಮೂರು ದಿನ ಫ್ರೀ ಶೋ ಆಯೋಜಿಸಲಾಗಿದೆ. ಪ್ರತಿದಿನ 3 ಗಂಟೆಯಿಂದ ಸಂಜೆ 6 ರ ಶೋವನ್ನು ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ಎಲ್ಲ ಹಿಂದೂ ವಿದ್ಯಾರ್ಥಿಗಳು ಒಟ್ಟಾಗಿ ನೋಡಿ ಎಂದು ಮಾಜಿ ಶಾಸಕ, ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮನವಿ ಮಾಡಿದ್ದಾರೆ.
ದಿ ಕೇರಳ ಸ್ಟೋರಿ’ ಸಿನಿಮಾ ಮೇ 5 ರಂದು ದೇಶಾದ್ಯಂತ ಬಿಡುಗಡೆಯಾಗಿತ್ತು. ಇದಕ್ಕೆ ಅನೇಕ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ನಿಂದ ಮಹಿಳೆಯರನ್ನು ಬಲವಂತವಾಗಿ ಮತಾಂತರಿಸಲಾಗುತ್ತದೆ ಎನ್ನುವ ಕಾಲ್ಪಣಿಕ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕಾಲ್ಪಣಿಕ ಚಿತ್ರದ ಬಗ್ಗೆ ಮಾತನಾಡಿದ್ದು ಖೇದಕರ ಸಂಗತಿಯಾಗಿದೆ.

Post a Comment

Previous Post Next Post
Focus News 18

Contact Form