Focus News 18

Bengaluru-ವಿಜಯ ಮಲ್ಯ ಬಳಿ ಇದ್ದ ಟಿಪ್ಪು ಸುಲ್ತಾನ್ ಖಡ್ಗ 145 ಕೋಟಿಗೆ ಹರಾಜು

ಬೆಂಗಳೂರು: ವಿಜಯ್ ಮಲ್ಯ ಬಳಿಯಿದ್ದ ಟಿಪ್ಪು ಸುಲ್ತಾನ್ ಖಡ್ಗ 145 ಕೋಟಿ ರೂ. ಗೆ ಹರಾಜು ಮಾಡಲಾಗಿದೆ. ಗೌಪ್ಯತೆ, ಸುರಕ್ಷತೆ ದೃಷ್ಟಿಯಿಂದ ಖರೀದಿದಾರರ ಹೆಸರನ್ನು ಸಂಸ್ಥೆ ಬಹಿರಂಗಪಡಿಸಿಲ್ಲ.

ಟಿಪ್ಪು ಸುಲ್ತಾನ್‌ನ ಖಡ್ಗವು ಈ ಹಿಂದೆ ಬ್ರಿಟಿಷರ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಖಡ್ಗವನ್ನು 2004ರಲ್ಲಿ ವಿಜಯ್‌ ಮಲ್ಯ 1.57 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿಸಿದ್ದರು. ಆದರೆ ಈಗ ಬರೋಬ್ಬರಿ 145 ಕೋಟಿ ರೂ.ಗೆ ಹರಾಜಾಗಿದೆ.

2018ರಲ್ಲಿ ಲಂಡನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದ ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಮಲ್ಯ ಅವರ ಯಾವುದೇ ಚರ, ಸ್ಥಿರ ಆಸ್ತಿ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಲು ಕೋರಿದ್ದವು. ಈ ವೇಳೆ ಉತ್ತರ ನೀಡಿದ್ದ ಮಲ್ಯ ನಮ್ಮ ಕುಟುಂಬಕ್ಕೆ ದುರಾದೃಷ್ಟವಾಗಿ ಕಾಡಿದ್ದ ಖಡ್ಗವನ್ನು ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದರು ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಮಲ್ಯ ಅವರ ವಕೀಲರು ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದರು
2004 ರಲ್ಲಿ ವಿಜಯ್ ಮಲ್ಯ 1.5 ಕೋಟಿ ರೂ., ಬೆಲೆಗೆ ಖರೀದಿಸಿದ್ದ ಖಡ್ಗ ನಿನ್ನೆ 145 ಕೋಟಿ ರೂ.ಗೆ ಹರಾಜಾಗಿದೆ. ಅನಾಮಧೇಯ ವ್ಯಕ್ತಿಯ ಪರವಾಗಿ ಬೋನ್‌ಹ್ಯಾಮ್‌ ಹರಾಜು ಸಂಸ್ಥೆ ಖರೀದಿಸಿದೆ. ಖಡ್ಗ ಖರೀದಿದಾರರ ಮಾಹಿತಿ ಹಂಚಿಕೊಳ್ಳಲು ಬೋನ್‌ಹ್ಯಾಮ್‌ ನಿರಾಕರಿಸಿದೆ. “ಗೌಪ್ಯತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಖಡ್ಗ ಮಾರಿದವರು, ತೆಗೆದುಕೊಂಡವರ ಹೆಸರನ್ನು ಪ್ರಕಟಿಸಲು ಸಾಧ್ಯವಿಲ್ಲಎಂದು ಹರಾಜು ನಡೆಸುವ ಬೋನ್‌ಹ್ಯಾಮ್‌ ಹೌಸ್‌ ಸಂಯೋಜಕ ಎನ್ರಿಕಾ ಮೆಡುಗ್ನೊ” ಹೇಳಿದ್ದಾರೆ.

ಖಡ್ಗದ ಇತಿಹಾಸ: 1799 ರ ಮೇ 4 ರಂದು ಸೆರಿಂಗಪಟ್ಟಂ(ಶ್ರೀರಂಗಪಟ್ಟಣ)ದಲ್ಲಿ ಟಿಪ್ಪು ಸುಲ್ತಾನ್ ಹುತಾತ್ಮರಾದ ನಂತರ ಈ ಖಡ್ಗವನ್ನು ತೆಗೆದುಕೊಳ್ಳಲಾಗಿದೆ ಮತ್ತು ಸೈನ್ಯದಿಂದ ಮೇಜರ್ ಜನರಲ್ ಬೇರ್ಡ್‌ಗೆ ನೀಡಲಾಯಿತು. ಅವರು ಆಜ್ಞಾಪಿಸಿದ ಆಕ್ರಮಣದಲ್ಲಿ ಅವರ ಧೈರ್ಯ ಮತ್ತು ನಡವಳಿಕೆಯ ಬಗ್ಗೆ ಅವರ ಉನ್ನತ ಅಭಿಪ್ರಾಯದ ಸಂಕೇತವಾಗಿ ಅದನ್ನು ನೀಡಲಾಗಿದೆ. ಈ ಅಕ್ರಮಣದಲ್ಲಿ ಟಿಪ್ಪು ಸುಲ್ತಾನ್ ಕೊಲ್ಲಲ್ಪಟ್ಟರು.ಖಡ್ಗದ ಮೇಲೆ ಬರೆದಿರುವ ಅಕ್ಷರ: ಶಂಶೀರ್-ಇ ಮಲಿಕ್ ಅಥವಾ ‘ರಾಜನ ಖಡ್ಗ’ ಎಂದು ಬರೆದಿದೆ ಯಾ ಅಲ್ಲಾ!ಯಾ ನಾಸಿರ್! ಯಾ ಫತ್ತಾ! ಯಾ ನಾಸಿರ್! ಯಾ ಮುಯಿನ್! ಯಾ ಜಹೀರ್!, ‘ಓ ಅಲ್ಲಾ!, ಓ ಸಹಾಯಕ!! ಓ ಸಹಾಯಕ! ಓ ಸಹಾಯಕ! ಎಂದು ಬರೆಯಲಾಗಿದೆ.

Bengaluru: Vijay Mallya's Tipu Sultan sword worth Rs 145 crore. Auctioned to. The name of the buyer has not been disclosed by the organization for privacy and security reasons.


 Tipu Sultan's sword, which was previously in the British Royal Museum, was bought by Vijay Mallya at an auction in 2004 for Rs 1.57 crore. But now it has been auctioned for Rs 145 crore.


 In 2018, the Union of Indian Banks had moved the London High Court seeking a restraining order from selling any of Mallya's movable and immovable assets. Mallya, who answered this time, had stated that he had sold the sword that was accidentally damaged to our family. During the hearing in the High Court, Mallya's lawyer said that he did not know anything about it.

 

 The sword which Vijay Mallya bought for Rs 1.5 crore in 2004 was auctioned for Rs 145 crore yesterday. Purchased by Bonham Auctions on behalf of an anonymous person. Bonham declined to share information about the buyer of the sword. Enrica Medugno, the auctioneer at Bonham House, said: "For reasons of privacy and security, the names of the sword sellers and buyers cannot be published."


 History of the Sword: This sword was taken after the martyrdom of Tipu Sultan on 4 May 1799 at Seringapatam (Srirangapatna) and given to Major General Baird by the army. It was given as a token of his high opinion of his courage and conduct in the invasion which he commanded. Tipu Sultan was killed in this act.
 The inscription on the sword reads: Shamshir-e Malik or 'Sword of the King' Ya Allah! Ya Nasir! Ya Fatta! Ya Nasir! Ya Muin! Ya Zaheer!, ‘O Allah!, O Helper!! O Helper! O Helper! It is written that


Post a Comment

Previous Post Next Post
Focus News 18

Contact Form