Focus News 18

Bengaluru - ಪ್ಲೀಸ್ ತಾತನನ್ನು ಮಿನಿಸ್ಟರ್‌ ಮಾಡಿ: ರಾಹುಲ್‌ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದಲ್ಲಿ ಟಿ.ಬಿ. ಜಯಚಂದ್ರ ಅವರನ್ನು ಸಚಿವರಾಗಿ ಆಯ್ಕೆ ಮಾಡದೇ ಇರುವುದಕ್ಕೆ ಅವರ ಮೊಮ್ಮಗಳೂ ಬೇಸರಗೊಂಡಿದ್ದು, ಈ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರಿಗೆ ಪತ್ರ ಬರೆದಿದ್ದಾಳೆ.

ಇಂಗ್ಲಿಷ್‌ನಲ್ಲಿ ಪತ್ರ ಬರೆದಿರುವ ಆರ್ನಾ ಸಂದೀಪ್‌, ಕೊನೆಯಲ್ಲಿ ಒಂದು ಸ್ಮೈಲಿಯನ್ನೂ ಅಂಟಿಸಿದ್ದಾಳೆ. “Dear Rahul Gandhi, I Am TB Jayachandras Granddaughter. I Am sad that my grandfather did not become minister. I want him to become minister because he is kind, capable and hardworking. Please” ಎಂದು ಬರೆದಿದ್ದಾಳೆ

ತಮ್ಮ ತಾತ ಸಚಿವರಾಗದೇ ಇದ್ದದ್ದಕ್ಕೆ ಬೇಸರವಾಗಿದೆ. ನನ್ನ ತಾತ ಬಹಳ ಕರುಣಾಮಯಿ, ಸಾಮರ್ಥ್ಯ ಇರುವವರು ಹಾಗೂ ಪರಿಶ್ರಮಿಯಾಗಿದ್ದಾರೆ, ಅವರು ಸಚಿವರಾಗಬೇಕೆಂದು ನಾನು ಬಯಸುತ್ತೇನೆ. ದಯಮಾಡಿ ಎಂದು ಪತ್ರದಲ್ಲಿ ತಿಳಿಸಿ ಕೊನೆಯಲ್ಲಿ ಒಂದು ಸ್ಮೈಲಿಯನ್ನೂ ಹಾಕಿದ್ದಾಳೆ. ಸ್ವಯಂಸ್ಫೂರ್ತಿಯಿಂದ ಮೊಮ್ಮಗಳು ಪತ್ರ ಬರೆದಿರುವುದನ್ನು ಕಂಡು ಜಯಚಂದ್ರ ಅಚ್ಚರಿಪಟ್ಟಿದ್ದಾರೆ.

ತಮ್ಮನ್ನು ಆಯ್ಕೆ ಮಾಡದೇ ಇರುವ ಕುರಿತು ಮಾಧ್ಯಮಗಳ ಎದುರು ಜಯಚಂದ್ರ ಕೂಡ ಅಸಮಾಧಾನ ಹೊರಹಾಕಿದ್ದರು.
Bengaluru: In the Congress government, T.B. Jayachandra's granddaughter was also upset that Jayachandra was not selected as a minister and wrote a letter to Congress leader Rahul Gandhi about this.

 Arna Sandeep, who wrote the letter in English, also pasted a smiley at the end. “Dear Rahul Gandhi, I Am TB Jayachandras Granddaughter. I am sad that my grandfather did not become a minister. I want him to become minister because he is kind, capable and hardworking. Please" she wrote

 He is sad that his grandfather did not become a minister. My grandfather is very kind, capable and diligent, I want him to become a minister. She also put a smiley at the end of the letter saying please. Jayachandra is surprised to see that her granddaughter wrote the letter spontaneously.

 Jayachandra also expressed his displeasure in front of the media that he was not selected.

Post a Comment

Previous Post Next Post
Focus News 18

Contact Form