Focus News 18

Chamarajanagar - ಸಿಮ್ಸ್ ಡೀನ್ ವಜಾಕ್ಕೆ ಆಗ್ರಹಿ ಅಂಬೇಡ್ಕರ್ ಅನುಯಾಯಿಗಳ ಮಹಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

ಚಾಮರಾಜನಗರ: ಅಂಬೇಡ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಿಮ್ಸ್‌ ಡೀನ್‌ ಡಾ.ಸಂಜೀವ್ ರೆಡ್ಡಿ ವಜಾಕ್ಕೆ ಆಗ್ರಹಿಸಿ ಅಂಬೇಡ್ಕರ್ ಅನುಯಾಯಿಗಳ ಮಹಾ ಒಕ್ಕೂಟದ ಸಾವಿರಾರೂ ಕಾರ್ಯಕರ್ತರು ಇಂದು ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಡಾ. ಬಿಆರ್ ಅಂಬೇಡ್ಕರ್ ಸಮುದಾಯ ಪವನದ ಎದುರು ಜಮಾಯಿಸಿದ ಜಿಲ್ಲೆ ಹಾಗೂ ವಿವಿಧ ಜಿಲ್ಲೆಗಳಿಂದ ಆಗನಿಸಿದ್ದ ಸಾವಿರಾರು ಅಂಬೇಡ್ಕರ್ ಅನುಯಾಯಿಗಳ ಮಹಾ ಒಕ್ಕೂಟದ ಕಾರ್ಯಕರ್ತರು ಸಿಮ್ಸ್ ಡೀನ್ ಡಾ.ಸಂಜೀವ್ ಅವರ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಲ್ಲಿಂದ ಹೊರಟ ರ್ಯಾಲಿ ಸತ್ತಿ ರಸ್ತೆ ಮೂಲಕ ಗುಂಡ್ಲುಪೇಟೆ ವೃತ್ತಕ್ಕೆ ತೆರಳಿ, ದೊಡ್ಡಂಗಡಿ,ಚಿಕ್ಕಂಗಡಿ ಬೀದಿಗಳಲ್ಲಿ ಸಾಗಿ ಸಂತೇಮರಹಳ್ಳಿ ವೃತ್ತ ತಲುಪಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ-209ರ ಮೂಲಕ ಶ್ರೀಭವನೇಶ್ವರಿ ವೃತ್ತ ತಲುಪಿತು.ನಂತರ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನ ತಲುಪಿ ಅಲ್ಲಿಯೂ ಕೆಲ ಕಾಲ ಪ್ರತಿಭಟನೆ ನಡೆಸಿದರು.

ಮೆರವಣಿಗೆಯುದ್ದಕ್ಕೂ ಸಿಮ್ಸ್ ಡೀನ್ ಡಾ.ಸಂಜೀವ್ ಅವರ ವಿರುದ್ದ ಧಿಕ್ಕಾರದ ಘೊಷಣೆ ಕೂಗಿ, ಅವರನ್ನು ಸೇವೆಯಿಂದ ಅಮಾನತು ಗೊಳಿಸಬೇಕೆಂಬ ಘೋಷಣೆಗಳನ್ನು ಕೂಗಿದರು.

ಮೇ 18 ರಂದು ಡೀನ್ ಡಾ. ಸಂಜೀವ್ ರೆಡ್ಡಿ ಚೆಂಬರ್‌ಗೆ ಹೊರಗುತ್ತಿಗೆ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೆಲ ವೈದ್ಯರು ಹೋಗಿದ್ದಾರೆ.ಆ ಸಂದರ್ಭದಲ್ಲಿ ಡಾ.ಸಂಜೀವ್ ರೆಡ್ಡಿ ಅಂಬೇಡ್ಕರ್ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಾರೆ. 
ಈ ಸಂಬಂಧ ಎಸ್ಸಿ. ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ಕೂಡ ದಾಖಲಾಗಿದ್ದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ, ಇಲ್ಲಿಯ ತನಕ ಅವರ ವಿರುದ್ದ ಯಾವುದೇ ಗಂಭೀರ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಅವರನ್ನು ಅಮಾನತ್ತಿನಲ್ಲಿರಿಸಿ, ಉನ್ನತ ಮಟ್ಟದ ತನಿಖೆ ನಡೆಸಿ ಸೇವೆಯಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಯಾವುದೇ ಆಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಸೂಕ್ತ ಕ್ರಮಕ್ಕಾಗಿ ಪೋಲೀಸ್ ಸರ್ಪಗಾವಲಿನಲ್ಲಿ ನೆರಳಲ್ಲಿ
ಪ್ರತಿಭಟನೆ ನಡೆಯಿತು.

Chamarajanagar: Thousands of activists of Ambedkar's Great Union today staged a massive protest in Chamarajanagar demanding the dismissal of SIMS Dean Dr. Sanjeev Reddy who insulted Ambedkar with unspoken words.

 Nagar Dr. Activists of thousands of Ambedkar followers from different districts gathered in front of BR Ambedkar community hall and raised slogans of defiance against Sims Dean Dr. Sanjeev. Later, the rally left from there and proceeded to Gundlupet roundabout via Satti Road, passed through Doddangadi and Chikkangadi streets, reached Santemarahalli roundabout and reached Sribhavaneshwari roundabout via National Highway-209. Then reached District Administration Bhavan via B. Rachaiah Jodi Road and protested there for some time.

 During the march, Sims shouted slogans against Dean Dr. Sanjeev and called for his suspension from service.

 On May 18, Dean Dr. Some doctors went to the Sanjeev Reddy Chamber to discuss the problems of outsourced employees. On that occasion, Dr. Sanjeev Reddy insulted and insulted Ambedkar with unspoken words.
 In this connection SC. A case was also registered under the ST Atrocities Act and he was released on bail. However, no serious action has been taken against them till date. Therefore, the protestors submitted a petition to the District Collector demanding that the government suspend him immediately, conduct a high-level investigation and dismiss him from service.

 Police are in shadow in Sarpagaval for taking precautionary measures so that no untoward incident takes place
 There was a protest.

Post a Comment

Previous Post Next Post
Focus News 18

Contact Form