Focus News 18

Davanagere - ಮಧ್ಯರಾತ್ರಿ 1 ಗಂಟೆಗೆ ಆರೋಪಿ ಬಂಧನ, ಪೊಲೀಸರಿಂದ ತಪ್ಪಿಸಿಕೊಳ್ಳಲು ಸೇತುವೆಯಿಂದ ಜಿಗಿದ ಮಾಹಿತಿ ಹಕ್ಕು ಹೋರಾಟಗಾರ ಸಾವು *ರಕ್ಷಕರೇ ಭಕ್ಷಕರಾದರೆ . ಸಾಮಾನ್ಯ ನಾಗರಿಕರ ಪಾಡು ಏನು ?

ಆರೋಪಿಯನ್ನು ರಾತ್ರಿ 1 ಘಂಟೆಗೆ ಬಂಧಿಸಿದ್ದು ಏಕೆ ? 

ಅವರು ತಪ್ಪಿಸಿಕೊಂಡು ಓಡಿಹೋಗುವಷ್ಟು ಮಾನಸಿಕ ದೌರ್ಬಲ್ಯ ಹೊಂದಿರಲಿಲ್ಲ. ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ  ಮಾಹಿತಿಗಳು, ಪ್ರಕಟಗೊಂಡ ವರದಿಗಳನ್ನು ಅಧ್ಯಯನ ಮಾಡಿದರೆ ವೀರ ಶೋಧಕ ಗುಣದ ವ್ಯಕ್ತಿತ್ವ ಅವರು ಹೊಂದಿದ್ದರು. ಜಿಪಿನಿಂದ ಜಿಗಿದು ಹೋಗಲು ಅವಕಾಶ ಇರುವಂತೆ ಬಂಧಿಸಲಾಯಿತೇ? 

ಸುರಕ್ಷಿತವಾಗಿ ಕರೆದೊಯ್ಯುವ ಜವಾಬ್ದಾರಿಯು ಹೊಣೆಗಾರಿಕೆ ಬಂಧಿಸಿರುವ ಅಧಿಕಾರಿಗಳಿಗೆ ಇದೆ. 

ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ನಡೆದಿರುವುದು ಮಾಧ್ಯಮ ವರದಿಗಳಿಂದ ಸ್ಪಷ್ಟ. ಹರೀಶ್ ಅವರು ತಪ್ಪು ಮಾಡಿದ್ದಾರೆಂಬ ಆರೋಪ ಬಂದಾಕ್ಷಣ ಬೆದರುವವರಲ್ಲ ಇಷ್ಟೊಂದು ಅಕ್ರಮದ ಬಗ್ಗೆ ಹೋರಾಟ ಮಾಡಿದ ಇವರ ಹೋರಾಟದ ಹಾದಿಯನ್ನು ಅವರು ಸುದ್ದಿ ಗೋಷ್ಠಿ ಮಾಡಿರುವ  ವರದಿಗಳು ಸ್ಪಷ್ಟ ಮಾಡುತ್ತವೆ. 

ಆದರಿಂದ ಹರೀಶ್ ಅವರ ಸಾವು ಪೂರ್ವಯೋಜಿತ ಎಂಬುದನ್ನು ಅವರ ಹೋರಾಟದ ಪತ್ರಿಕೆ ವರದಿಗಳು ಹೌದು ಎನ್ನುತ್ತೇವೆ. ಉಹುಂ, ಈ ಪ್ರಕರಣ ಅತ್ಯಂತ ಗಂಭೀರ ಸ್ವರೂಪದ ದಯನೀಯ ಘಟನೆ. ಅಮಾನವೀಯ. ಇದು ರಾಜ್ಯ ಉಚ್ಚ ನ್ಯಾಯಾಲಯದ ವರ್ಕಿಂಗ್ ನ್ಯಾಯಮೂರ್ತಿಗಳ ಮುಖಾಂತರ ಉನ್ನತ ಮಟ್ಟದಲ್ಲಿ ತನಿಖೆ ಮಾಡಿಸಬೇಕು. ನ್ಯಾಯ ದೊರೆಯಲಿ. ಅವರ ಕುಟುಂಬಕ್ಕೆ ಬಲ ತುಂಬಲಿ.


Why was the accused arrested at 1 o'clock in the night?

 He was not mentally weak enough to run away. He had the personality of a heroic investigator if he studied the information released to the media and the published reports. Arrested to have a chance to jump out of the GP?

 Arresting officers are responsible for safe evacuation.

 It is clear from the media reports that there is a big conspiracy behind this case. Harish is not one to be intimidated when he is accused of wrongdoing, but the reports of his press conference make it clear that he fought against so many illegalities.

 Therefore, the newspaper reports of Harish's struggle say that his death was premeditated. Um, this case is a tragic incident of the most serious nature. Inhuman. It should be investigated at the highest level by the working justices of the State High Court. Let there be justice. May his family find strength.



Post a Comment

Previous Post Next Post
Focus News 18

Contact Form