Focus News 18

Kittur - ಕಾಂಗ್ರೆಸ್ ಸರ್ಕಾರದ ನೂತನ ಸಚಿವರಾದ ಸತೀಶ್ ಜಾರಕಿಹೊಳಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ, ಸೇರಿದಂತೆ ಅಮಟೂರು ಬಾಳಪ್ಪ ಪುತ್ಥಳಿಗಳಿಗೆ ಗೌರವ ಸಮರ್ಪಣೆ

ಕಾಂಗ್ರೆಸ್ ಸರ್ಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸತೀಶ್ ಜಾರಕಿಹೊಳಿ ಸಚಿವರಾದ ಬಳಿಕ ಮೊದಲ ಬಾರಿಗೆ ಕಿತ್ತೂರು ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿ ಚೆನ್ನಮ್ಮಾಜೀಗೆ ಗೌರವ ಸಮರ್ಪಣೆ ಮಾಡಿದರು.
      ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ, ಸೇರಿದಂತೆ ಅಮಟೂರು ಬಾಳಪ್ಪ ಪುತ್ಥಳಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಮತ್ತು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಮಾಲಾರ್ಪಣೆ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿಯವರು ಐತಿಹಾಸಿಕ ಪುಣ್ಯಸ್ಥಳವಾದ ಕಿತ್ತೂರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ವತಿಯಿಂದ ಅನೇಕ ಮೂಲಭೂತ ಸೌಕರ್ಯಗಳನ್ನು ಹಲವಾರು ಅಭಿವೃದ್ಧಿ ಯೋಜನೆಯನ್ನು ಮತ್ತು ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದಲಿದೆ ಎಂದು ಹೇಳಿದರು.
ಇನ್ನೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು ನಮ್ಮ ಸರ್ಕಾರದ ಮುಖ್ಯ ಯೋಜನೆಯೇ ಅದೇ ಆಗಿದೆ ಜನರಿಗೆ ಪಕ್ಷದಿಂದ ಕೊಟ್ಟ ಭರವಸೆಯನ್ನು ಖಂಡಿತವಾಗಿ ಕೊಡುತ್ತೆವೆ ಅದರಲ್ಲಿ ಅನುಮಾನ ಬೇಡ ಹಾಗೂ ನಮ್ಮ ಸರ್ಕಾರ ಇರುವುದೇ ಜನರಿಗಾಗಿ ಅವರಿಗೆ ಕೊಟ್ಟ ಗ್ಯಾರಂಟಿ ಅವರಿಗೆ ಸಿಕ್ಕೆಸಿಗುತ್ತದ್ದೆ ಎಂದರು.
ಮತ್ತು ಕಿತ್ತೂರು ಕ್ಷೇತ್ರದಲ್ಲಿ ರಸ್ತೆಗಳ ವಿಷಯವಾಗಿ ಉತ್ತರಿಸಿದ ಸಚಿವರು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರಗತಿಯನ್ನು ಹೊಂದಲಿದೆ ಸರ್ಕಾರದ ವತಿಯಿಂದ ಏನೆಲ್ಲಾ ಮಾಡಬಹುದೋ ಆ ಎಲ್ಲ ಕೆಲಸಗಳನ್ನು ಕ್ರಮೇಣವಾಗಿ ಕಿತ್ತೂರು ಕ್ಷೇತ್ರಕ್ಕೆ ಮಾಡಲಾಗುವುದು ಎಂದು ಸತೀಶ್ ಜಾರಕಿಹೊಳಿಯವರು ಪತ್ರಿಕಾ ಸಂದರ್ಶನದಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್, ಹಬೀಬ್ ಶಿಲೇದಾರ, ಸಂತೋಷ ಹಂಚಿನಮನಿ, ಆಶಪಕ್ ಹವಾಲ್ದಾರ್, ಯಲ್ಲಪ್ಪ ಮಣ್ಣವಡ್ಡರ, ಈರಪ್ಪ ಕಲ್ಲವಡ್ಡರ, ಸಂಜು ಲೋಕಾಪುರ, ರೋಹಿಣಿ ಬಾಬಾಸಾಹೇಬ್ ಪಾಟೀಲ್, ಹಾಗೂ ಇತರೆ ಅನೇಕ ನಾಯಕರು ಮತ್ತು ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.

Satish Jarakiholi, who took oath as the new minister of the Congress government, visited the historical place of Kittur for the first time after becoming a minister and paid homage to Chennammaji.
       Talking to journalists after Minister Satish Jarakiholi and Kittur MLA Babasaheb Patil garlanded Kittur Rani Chennamma and Sangolli Rayanna, including Amaturu Balappa idols, Satish Jarakiholi said that Kittur, a historical holy place, will have many development projects and a lot of progress in the field by the Congress government in the coming days.
         The minister also clarified about the guarantee schemes of the government and said that the main scheme of our government is the same. We will surely give the promise given by the party to the people. There is no doubt about it and the guarantee given to the people by our government is there.
        And when the Minister answered about the roads in Kittur constituency, there will be progress step by step in the coming days, whatever work can be done on behalf of the government, all those works will be done gradually for Kittur constituency, Satish Jarakiholi said in a press interview.
       On this occasion Kittoor MLA Babasaheb Patil, Habib Shiledar, Santhosh Hanchinamani, Ashpak Havaldar, Yallappa Mannavadara, Erappa Kallavadara, Sanju Lokapura, Rohini Babasaheb Patil, and many other leaders and huge fans were present.


Post a Comment

Previous Post Next Post
Focus News 18

Contact Form