Focus News 18

Mysore - ಸಾಲಬಾಧೆ ತಾಳಲಾರದೇ ಇಬ್ಬರು ರೈತರು ಆತ್ಮಹತ್ಯೆ

ಮೈಸೂರು ; ಸಾಲಭಾದೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಹುಣಸೂರು ತಾಲ್ಲೂಕಿನ ಶ್ಯಾನಭೋಗನಹಳ್ಳಿಯ ಸುರೇಶ್(58) ಎಂಬಾತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ಎಕರೆ ಜಮೀನು ಹೊಂದಿದ್ದ ರೈತ ಸುರೇಶ್​, ಬ್ಯಾಂಕ್ ಸೊಸೈಟಿ ಸೇರಿ 7 ಲಕ್ಷ ಸಾಲ ರೂಪಾಯಿ ಸಾಲ ಮಾಡಿದ್ದನು.

ಇನ್ನೇನು ಬೆಳೆ ಬಂದ ಕೂಡಲೇ ಎಲ್ಲವನ್ನ ಹಿಂದಿರುಗಿಸುವ ಉತ್ಸಾಹದಲ್ಲಿದ್ದ ರೈತನಿಗೆ ಬೆಳೆ ಕೈ ಕೊಟ್ಟ ಹಿನ್ನೆಲೆ‌ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಲ್ಲದೇ ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮದ ರಾಜಶೆಟ್ಟಿ (78) ಎಂಬಾತ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 5 ಎಕರೆ ಜಮೀನು ಹೊಂದಿದ್ದ ರಾಜಶೆಟ್ಟಿ, ತಂಬಾಕು ರಾಗಿ ಬೆಳೆ ಬೆಳೆದಿದ್ದರು.

ಬ್ಯಾಂಕ್, ಸೊಸೈಟಿ, ಮಹಿಳಾ ಸಂಘ, ಕೈ ಸಾಲ ಸೇರಿ ಸುಮಾರು 8 ಲಕ್ಷ ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಬಡ್ಡಿ ಹೆಚ್ಚಾಗಿತ್ತು. ಇದರಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Mysore; An incident has taken place in Mysore where two farmers have committed suicide as they could not bear the debt.

 Suresh (58) of Shayanabhoganahalli in Hunsur taluk committed suicide by consuming disinfectant. Suresh, a farmer who had two acres of land, had taken a loan of 7 lakh rupees with the bank society.

 After handing over the crop to the farmer who was eager to return everything as soon as the next crop came, he committed suicide by consuming a pesticide in the farm. A case has been registered in Bilikere police station in this regard.

 Apart from this, Rajshetty (78) of Karnakuppe village of Hunsur taluk committed suicide by hanging himself at home. Rajshetty, who had 5 acres of land, had grown a crop of millet and tobacco.

 Bank, society, women's association, hand loan, he had borrowed about 8 lakhs. The interest was high and the loan could not be repaid. Due to this, he committed suicide by hanging himself. A case has been registered in this regard at Hunsur rural police station.

Post a Comment

Previous Post Next Post
Focus News 18

Contact Form