Focus News 18

Yadagiri - ಹುಣಸಗಿ ತಾಲೂಕಿನ ಈರಯ್ಯ ಕೊಳ್ಳಿಮಠ ಶಿಕ್ಷಕರಿಗೆ ಸಹಪಾಠಿಗಳಿಂದ ಸಂತಾಪ

ಹುಣಸಗಿ: ಕನ್ನಡಾಂಬೆಯ ವೀರಪುತ್ರನಾದ ಈರಯ್ಯ ಕೊಳ್ಳಿಮಠ ಅವರ ನಿಧನ ಹುಣಸಗಿ ತಾಲೂಕಿನ ಜನತೆಗೆ ತುಂಬಲಾರದ ನಷ್ಟವಾಗಿದೆ ಎಂದು ವಿಶ್ವನಾಥ ಹೂಗಾರ ಹೇಳಿದರು.

ಪಟ್ಟಣದ ಯು.ಕೆ.ಪಿ ಕ್ಯಾಂಪಿನ ಆವರಣದಲ್ಲಿ ಆಯೋಜಿಸಲಾದ ಈರಯ್ಯ ಕೊಳ್ಳಿಮಠ ಅವರ ನುಡಿ ನಮನದಲ್ಲಿ ಮಾತನಾಡಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು ಅವರ ಈ ಒಂದು ನಿಧನವು ಇಡೀ ಹುಣಸಗಿ ತಾಲೂಕಿನ ಜನತೆಗೆ ತುಂಬಲಾರದ ನಷ್ಟವಾಗಿದೆ. ಯಾಕೆಂದರೆ ಅವರು ಕನ್ನಡಾಂಬೆಯ ವೀರಪುತ್ರನಾಗಿ ಹಲವ ಚುಟುಕು ಕವನ ಸಂಕಲನಗಳನ್ನು ಪ್ರಕಟಿಸುತ್ತು ಹುಣಸಗಿಯ ಆಧುನಿಕ ಯಿಗದ ಬೀಚಿ ಎಂದೇ ಪ್ರಖ್ಯಾತಿ ಪಡೆದಿದ್ದರು.
 ಅಲ್ಲದೇ ಅವರು ಇನ್ನಷ್ಟು ದಿನಗಳ ವರೆಗೆ ನಮ್ಮೊಂದಿಗೆ ಇರಬೇಕಿತ್ತು ಆದರೆ ವಿಧಿಯ ಆಟಕ್ಕೆ ಅವರು ನಮ್ಮೆನ್ನೇಲ್ಲಾ ಅಗಲಿ ಹೋಗಿದ್ದು ನಮ್ಮ ಗೆಳೆತನಕ್ಕೆ ಒಂದು ದೊಡ್ಡ ಹಾನಿಯಾಗಿದೆ ಈ ನಿಟ್ಟಿನಲ್ಲಿ ಅವರ ಆತ್ಮಕ್ಕೆ ಆ ಭಗವಂತನು ಶಾಂತಿ ಕರಣಿಸಲು ಜೊತೆಗೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಹೇಳಿದರು.
ನಂತರ ವೀರೇಂದ್ರ ಶೆಟ್ಟಿ ಬಳಿ ಅವರು ಕೊಳ್ಳಿಮಠ ಅವರ ಒಡನಾಟದ ಬಗ್ಗೆ ಮಾತನಾಡುತ್ತಾ ಸುಮಾರು 1992 ನೇ ಇಸ್ವಿಯಿಂದ ಅವರ ನಮ್ಮ ಪರಿಚಯವಾಯಿತು ನಂತರ ಅವರು ನಮ್ಮ ಊರಿಗೆ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ತದನಂತರ ಖಾಯಂ ಶಿಕ್ಷಕರಾಗಿ ತಮ್ಮ ಶಿಕ್ಷಕ ವೃತ್ತಿ ಜೀವನವನ್ನು ಆರಂಭಿಸಿದರು.

ನಂತರ ಚುಟುಕು ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮೊದಲನೇ ಕೃತಿ ಕನ್ನಡ ದೃವತಾರೆ, ನಂತರದ ದಿನಗಳಲ್ಲಿ ರಸ ನಿಮಿಷ, ಚೈತನ್ಯದ ಚಿಲುಮೆ, ಜೇನು ಹನಿ ಎಂಬ ನಾಲ್ಕು ಚುಟುಕು ಕವನಗಳನ್ನು ಹೊರ ತರುವ ಮೂಲಕ ಹುಣಸಗಿ ಹಾಗಾಉ ಹಳ್ಳೂರು ಬೀಚಿ ಎಂದು ಖ್ಯಾತಿ ಗಳಿಸುವುದರೊಂದಿಗೆ ಎಲ್ಲರನ್ನು ನಕ್ಕು ನಗಿಸುತ್ತಾ ಕಣ್ಮರೆಯಾದರು ಅವರ ಈ ಅಗಲಿಕೆಯು ನಮಗೆಲ್ಲಾ ತುಂಬಾ ನೋವನ್ನುಂಟು ಮಾಡಿದೆ ಹಾಗಾಗಿ ಅವರ ಒಂಯ ಆತ್ಮಕ್ಕಡ ಭಗವಂತನು ಶಾಂತಿ ಕರುಣಿಸಲಿ ಎಂದರು. 

ತದನಂತರ ಭೋವಿ ಸಮಾಜದ ಅಧ್ಯಕ್ಷ ನಾಗಪ್ಪ ಭೋವಿ ಕೂಡಾ ಮಾತನಾಡಿ ತಮ್ಮ ನೋವನ್ನು ಹಂಚಿಕೊಂಡರು. 

ಇದೇ ವೇಳೆವಅಣ್ಣಾರಾವನಿರ್ವತ್ತ ಪೋಲಿಸ್ ಎ.ಎಸ್.ಐ, ವಿರೇಂದ್ರ ಶೆಟ್ಟಿ ಬಳಿ, ವಿಶ್ವನಾಥ ಹೂಗಾರ, ಜಗನ್ನಾಥಗೌಡ ಪಾಟೀಲ್ ನಡಹಳ್ಳಿ, ದೇವಿಂದ್ರಪ್ಪ, ಬಸವರಾಜ ಹಂದ್ರಾಳ, ಶಾಂತಪ್ಪ ಬಂಟನೂರ, ಜಗದೇವಪ್ಪ ದೇಸಾಯಿ, ಶಿವು ದೇಸಾಯಿ, ನಂದಪ್ಪ ಪೀರಾಪೂರ, ಜಮೀಲ ಬಂಗಲಿ, ಬಸವರಾಜ ಬೊಮ್ಮನಹಳ್ಳಿ, ಮಲ್ಲಣ್ಣ ಡ್ರೈವರ್, ಶರಣಪ್ಪ ಕೃಷ್ಣಾಪೂರ, ಚನ್ನಬಸವ ಮಗದಾಳ ಸೇರಿದಂತೆ ಇತರರು ಭಾಗಿಯಾಗಿದ್ದರು.

 *ವರದಿ ಅಯ್ಯಣ್ಣ ಹೂಗಾರ್ ಯಾದಗಿರಿ*

Hunsagi: Vishwanath Hugara said that the death of Irayya Kollimatha, the hero son of Kannadambe, is an irreparable loss to the people of Hunsagi taluk.

 Speaking at a tribute to Irayya Kollimatha organized in the premises of the UKP camp in the town, his death at a very young age is an irreparable loss to the people of Hunsagi Taluk. Because he published many collections of witty poems as the heroic son of Kannadambe and became famous as the modern Yigada Beach of Hunsagi.
  Also, he should have stayed with us for more days but due to fate he left all of us which is a great damage to our friendship. In this regard, may the Lord grant peace to his soul and give strength to his family to bear the grief.
 Then he spoke to Virendra Shetty about his association with Kollimatha and we got to know him from around 1992. Then he was serving our town as an honorary teacher and then started his teaching career as a permanent teacher.

 Later, he engaged himself in witty literary activities and his first work was Kannada Drivatare, in later days he published four witty poems namely Rasa Min, Chaitanya Chilume, Jenu Hani and gained fame as Hunasagi Haagau Hallur Beachy. May the Lord grant peace, he said.

 Later, Nagappa Bhovi, president of Bhovi Samaj also spoke and shared his pain.

 Around Annaravanirvatta Police ASI, near Virendra Shetty, Vishwanath Hugara, Jagannath Gowda Patil Nadahalli, Devindrappa, Basavaraja Handrala, Shantappa Bantanur, Jagadevappa Desai, Shivu Desai, Nandappa Peerapura, Jameela Bangali, Basavaraja Bommanahalli, Mallanna Driver, Sharanappa Krishna Pura, Channabasava Magadala and others were involved.

  *Report Ayyanna Hoogar Yadagiri*

Post a Comment

Previous Post Next Post
Focus News 18

Contact Form