Focus News 18

Badami - ಅಲ್ಲಮ ನ ಆದ್ಯಾತ್ಮ ವಿಶ್ವ ಸಂಸ್ಥೆ ವತಿಯಿಂದ ಚಾಲುಕ್ಯರ ನಾಡಿನಲ್ಲಿ ಉಪನ್ಯಾಸ ಕಾರ್ಯಕ್ರಮ

ಅಲ್ಲಮನ ಅಧ್ಯಾತ್ಮ 
ಬದಾಮಿಯ ವಿಶ್ವಚೇತನ ಸಂಸ್ಥೆ, ಬದಾಮಿ ಇವರ ಆಶ್ರಯದಲ್ಲಿ ಇಂದು ದಿನಾಂಕ : 15 ಜೂನ್ 2023 ರಂದು ಸಂಜೆ 7.30 ಕ್ಕೆ ಶಿವಯೋಗಮಂದಿರ ಶಾಖಾಮಠದ ಆವರಣದಲ್ಲಿ ಪ್ರಾಚೀನ ಮತ್ತು ಅರ್ವಾಚೀನ ತಣ್ತೀಜ್ಞಾನಿಕ ಅಂಶಗಳನ್ನು ತುಲನಾತ್ಮಕವಾಗಿ ವಿಮರ್ಶೆ ಮಾಡುವ “ರಾಜ್ಯದ ಹೆಸರಾಂತ ವಾಗ್ಮಿ, ಪ್ರಮುಖ ಚಿಂತಕಿ ಮತ್ತು ಬಾಗಲಕೋಟ ಜಿಲ್ಲೆಯ ಕಲ್ಲಹಳ್ಳಿ ಆಶ್ರಮ ಸುಮ್ಮನೆಯ”  
ಡಾ. ವೀಣಾ ಬನ್ನಂಜೆಯವರ “ಅಲ್ಲಮನ ಅಧ್ಯಾತ್ಮ”ದ ವಿಷಯವಾಗಿ ಉಪನ್ಯಾಸವನ್ನು ಹಮ್ಮಿಕೊಂಡಿತ್ತು.  
ಡಾ. ವೀಣಾ ಬನ್ನಂಜೆಯವರು ಅಲ್ಲಮಪ್ರಭುಗಳ ಜನನ 12 ನೇ ಶತಮಾನದಲ್ಲಿ ಭಾರತದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಸುಜ್ಞಾನಿ ಮತ್ತು ನಿರಾಶಂಕರ ದಂಪತಿಗಳಿಗೆ ಜನಿಸಿದ ಇವರು ಬಸವಣ್ಣ ಮತ್ತು ಅಕ್ಕಮಹಾದೇವಿ, ಹರಿಹರರ ಸಮಕಾಲೀನರಾಗಿದ್ದರು. 
ಅಲ್ಲಮಪ್ರಭು ಕಮಲಾತೆ ಎಂಬ ನರ್ತಕಿಯನ್ನು ಮದುವೆಯಾದರು, ಆದರೆ ಅವರು ಅಕಾಲಿಕ ಮರಣ ಹೊಂದಿದರು. ದುಃಖಿತ ಅಲ್ಲಮನು ಗುರಿಯಿಲ್ಲದೆ ಅಲೆದಾಡುವಾಗ ಒಂದು ಗುಹಾ ದೇವಾಲಯವನ್ನು ತಲುಪಿದನು, ಅಲ್ಲಿ ಅವನು ಸಂತ ಅನಿಮಿಶಯ್ಯನನ್ನು ಭೇಟಿಯಾದಗ ಆ ಸಂತನು ಅಲ್ಲಮನಿಗೆ ಒಂದು ಲಿಂಗದ ಪ್ರತಿಮೆಯನ್ನು ಕೊಟ್ಟು, ಅಲ್ಲಮನಿಗೆ ದೇವರ ಜ್ಞಾನವನ್ನು ಅನುಗ್ರಹಿಸಿದನು ಮತ್ತು ಅಲ್ಲಮನು ಅಲ್ಲಿಂದ ಪ್ರಬುದ್ಧನಾದನು ಮತ್ತು ಆಧ್ಯಾತ್ಮಿಕತೆಯ ಅನ್ವೇಷಕನಾಗಿ ರೂಪಾಂತರಗೊಂಡನು ಎಂದು ಉದಾಹರಣೆಗಳೊಂದಿಗೆ ಉಪನ್ಯಾಸ ನೀಡಿದರು.
ವಿಶ್ವಚೇತನದ ಇಷ್ಟಲಿಂಗ ಶಿರಸಿ, ಬಸಯ್ಯ ಮುತ್ತಲಗೇರಿ, ಮಹಾಗುಂಡಪ್ಪ ಮರೋಳ, ಬಸವರಾಜ ಸಂಕನೂರ ಹಾಗೂ ಸಂಸ್ಥೆಯ ಸದಸ್ಯರು, ಅಭಿಮಾನಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.

Allama's spirituality
 World Spiritual Institute, Badami under the auspices of “State renowned orator, eminent thinker and Summane of Kallahalli Ashram of Bagalkota district” who will comparatively review ancient and archaic metaphysical aspects in Shiv Yoga Mandir Branch premises today Date : 15th June 2023 at 7.30 PM
 Dr. Veena Bannanje's lecture was on “Allamana Adhyatma”.
 Dr. Veena Bannanjea Allama Prabhu was born in the 12th century in the Shimoga district of Karnataka, India to Sujnani and Nirasankara, a contemporary of Basavanna and Akkamahadevi, Harihara.
 Allama Prabhu married a dancer named Kamalate, but she died prematurely. The saddened Allama, wandering aimlessly, reached a cave temple, where he met Saint Animishaya, who gave Allama a lingam statue, blessed Allama with the knowledge of God, and lectured with examples that Allama became enlightened and transformed into a seeker of spirituality.
 World-spirited Isthalinga Shirasi, Basaiah Muttalageri, Mahagundappa Marola, Basavaraja Sankanur and members and fans of the organization participated in the lecture program.

Post a Comment

Previous Post Next Post
Focus News 18

Contact Form