Focus News 18

Badami - ವಿದ್ಯುತ್ ದರ ಏರಿಕೆ ಖಂಡಿಸಿ ಬಾದಾಮಿ ತಾಲೂಕಿನ ಕೆರೂರಿನಲ್ಲಿ ಹೆಸ್ಕಾಮ್ ಕಛೇರಿ ಎದುರು ಸಾರ್ವಜನಿಕರ ಪ್ರತಿಭಟನೆ

ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ವಿದ್ಯುತ್ ದರದಲ್ಲಿ ಅತಿಯಾದ ಏರಿಕೆ ಖಂಡಿಸಿ ಸಾರ್ವಜನಿಕರು ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಯಾವುದೇ ರೀತಿಯ ಮಾಹಿತಿ ತಿಳಿಸದೇ ವಿದ್ಯುತ್ ಬಿಲ್ ಹೆಚ್ಚಳ ಮಾಡಿದ್ದರ ಕುರಿತು ನೇಕಾರರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.

ಹೆಸ್ಕಾಂ ಇಲಾಖೆಯ ವಿಭಾಗೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬಿಲ್ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರತಿ ಯುನಿಟ್ ಗೆ ಎರಡು ರೂಪಾಯಿ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಇನ್ನು ನೇಕಾರರ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾದ ಹಿನ್ನಲೆ ತೊಂದರೆಗೆ ಒಳಗಾಗಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡು ನೇಕಾರರು ಹಾಗೂ ಸಾರ್ವಜನಿಕರ ಸಮಸ್ಯೆ ಬಗೆ ಹರಿಸಲು ಸರಕಾರಕ್ಕೆ ಮನವಿ ತಿಳಿಸಿದ್ದಾರೆ.

ಹೆಸ್ಕಾಂ ಅಧಿಕಾರಿಗಳು ಇನ್ನು ಮುಂದಿನ ತಮ್ಮ ಇಲಾಖೆಯ ಷರತ್ತು ಗಳನ್ನು ಬಹಿರಂಗವಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

In Kerura town of Badami taluk of Bagalkota district, the public has condemned the exorbitant increase in the electricity rate. The weavers and the public have protested against the increase in the electricity bill without giving any information.

 They have submitted a request to the divisional officers of the Hescom department and expressed their outrage against the increase in the bill.
 He said that it has increased by two rupees per unit. The weavers and the public appealed to the government to solve the problem of the weavers and expressed their grief that they are in trouble due to the increase in the price of the raw materials of the weavers.

 It has been learned that Hescom officials have openly stated the conditions of their department from now on.

Post a Comment

Previous Post Next Post
Focus News 18

Contact Form