Focus News 18

Badami - ಚಾಲುಕ್ಯರ ನಾಡಿನಲ್ಲಿ ಚಾಲುಕ್ಯ ಅರಸರ ಕಲೆಗಳ ಛಾಯಾಚಿತ್ರ ನ ಮೂಲಕ ಅದ್ಭುತ ಪ್ರದರ್ಶನ

ಚಾಲುಕ್ಯ ವಂಶದ ಅರಸರಿಂದ ಮರಳುಶಿಲೆಯಲ್ಲಿ ಅದ್ಭುತವಾಗಿ ಕೊರೆದು ನಿರ್ಮಿಸಿದ ಗುಹಾಲಯಗಳಿಂದ ವಿಶ್ವಪ್ರಸಿದ್ಧ ಹೆಸರುವಾಸಿಯಾದ ವಾತಾಪಿ ಅಂದರೆ ಈಗಿನ ಬಾಗಲಕೋಟೆ ಜಿಲ್ಲೆಯ ಬದಾಮಿ. ಬದಾಮಿ ನಗರದಲ್ಲಿ ತಂಜಾವೂರು ದಕ್ಷಿಣ ವಲಯದ ಸಾಂಸ್ಕೃತಿಕ ಕೇಂದ್ರ ಮತ್ತು ಧಾರವಾಡ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಯೋಗದೊಂದಿಗೆ “ “ಅದ್ಭುತ ಗುಹೆಗಳು” ಛಾಯಾಚಿತ್ರ ಪ್ರದರ್ಶನವನ್ನು 3 ನೇ ಗುಹೆಯ ಆವರಣದಲ್ಲಿ ಹಮ್ಮಿಕೊಂಡಿತ್ತು. ಈ ವೇಳೆ ನವದೆಹಲಿಯ ಸಾಂಸ್ಕೃತಿಕ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಕೆ.ಸಿಂಗ್ ಉದ್ಘಾಟಿಸಿ ಮಾತನಾಡಿದರು. 
ಮತ್ತು ಸಾಂಸ್ಕೃತಿಕ ಸಚಿವಾಲಯದ ಯೋಜನಾಧಿಕಾರಿಗಳಾದ ಶ್ರೀ ಅಶೋಕ, ರವೀಂದ್ರಕುಮಾರ, ಸಹಾಯಕ ಪುರಾತತ್ವ ಇಲಾಖೆಯ ಮುಖ್ಯಸ್ಥ ಪ್ರಸನ್ನಕುಮಾರ, ಪುರಾತತ್ವ ಇಲಾಖೆ ಧಾರವಾಡ ವಲಯದ ಸಹಾಯಕ ಅಧೀಕ್ಷಕ ಡಾ. ದೇವರಾಜ.ಎಸ್.ಎಂ , ಅಧೀಕ್ಷಕಿ ಡಾ.ರೇಷ್ಮಾ ಸಾವಂತ ಹಾಗೂ ಇನ್ನೀತರ ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದರು. 
ನಂತರ ರಾತ್ರಿ 06-00 ಘಂಟೆಯಿಂದ 9-00 ಘಂಟೆಯ ವರೆಗೆ ಹಮ್ಮಿಕೊಂಡಿದ್ದು, ಮೈಸೂರು ಕಲಾ ತಂಡದಿಂದ ಕಂಸಾಳೆ, ಕಾರವಾರದ ವಿಜಯನಾರಾಯಣ ಮತ್ತು ಕಲಾವಿದರಿಂದ ಸಿದ್ಧಿಜನಾಂಗದ ಸಂಗೀತ ನೃತ್ಯ, ಶ್ರೀಮತಿ ಯಶೋಧರೆ ಮಲ್ಲಿಗವಾಡ ಮತ್ತು ಕಲಾವಿದರಿಂದ ಜೋಗತಿ ಹಾಡುಗಳು ಪ್ರೇಕ್ಷಕರ ಮನ ಸೆಳೆದವು

Vatapi i.e. Badami in the present day Bagalkote district is world famous for the caves carved into the sandstone by the kings of the Chalukya dynasty. In Badami city Thanjavur South Zone Cultural Center and Archaeological Survey of India, Dharwad organized a photo exhibition “Wonderful Caves” in the premises of Cave 3. On this occasion, New Delhi's Ministry of Culture's Undersecretary S.K.Singh gave the opening speech.
 And Project Officers of Ministry of Culture Mr. Ashoka, Rabindrakumar, Head of Assistant Archeology Department Prasannakumar, Assistant Superintendent of Archeology Department Dharwad Zone Dr. Devaraj.SM, Superintendent Dr. Reshma Sawant and other local officials were present.
 Later on from 06-00 hrs to 9-00 hrs, Kansale by Mysore Art Troupe, Siddhijananga Sangeet dance by Karwar Vijayanarayan and artists, Smt Yashodare Malligavada and Jogati songs by artists enthralled the audience.

Post a Comment

Previous Post Next Post
Focus News 18

Contact Form