Focus News 18

Bengalore - ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರನಾಗಿ ಶಾಸಕ ಪೊನ್ನಣ್ಣ ನೇಮಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ ವಿರಾಜಪೇಟೆಯ ಕಾಂಗ್ರೆಸ್ ಶಾಸಕ‌ ಎ. ಎಸ್. ಪೊನ್ನಣ್ಣ ನೇಮಕಗೊಂಡಿದ್ದಾರೆ.
ಪೊನ್ನಣ್ಣ ಅವರು ಮಾಜಿ ಜನಸಂಘ, ಜನತಾ ಪಕ್ಷ ಅಧ್ಯಕ್ಷರಾಗಿದ್ದ ದಿವಂಗತ ಎ. ಕೆ. ಸುಬ್ಬಯ್ಯರ ಪುತ್ರ. ಸುಬ್ಬಯ್ಯ ಅವರು 70ರ ದಶಕದಲ್ಲಿ ರಾಜ್ಯದ ಪ್ರಮುಖ ನಾಯಕರುಗಳಲ್ಲಿ ಒಬ್ಬರಾಗಿದ್ದರು. ಜನಸಂಘ ಮೂಲದಿಂದ ರಾಜಕೀಯ ಪ್ರವೇಶಿಸಿದ ಸುಬ್ಬಯ್ಯ ಅವರು ಅಂದು ಆಡಳಿತ ಪಕ್ಷದ ರೋಲೆಕ್ಸ್ ವಾಚ್ ಹಗರಣದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಿದ್ದರು.

ಜನಸಂಘ ಹಾಗೂ ಬಿಜೆಪಿಯಲ್ಲಿ ಗರ್ಭಗುಡಿ ಸಂಸ್ಕೃತಿ ಇದೆ ಎಂದು ಆರೋಪಿಸಿ ಪಕ್ಷದಿಂದ ಹೊರಗೆ ಬಂದು ತನ್ನದೇ ಆದ ಕನ್ನಡ ನಾಡು ಪಕ್ಷ ಕಟ್ಟಿದ್ದರು. ಬಿಜೆಪಿ ಹಾಗೂ ಸಂಘ ಪರಿವಾರದ ಕಟು ಟೀಕೆಕಾರರಾಗಿದ್ದರು. ನೇರ ನಡೆ ನುಡಿಗೆ ಸುಬ್ಬಯ್ಯ ಅವರು ಖ್ಯಾತರಾಗಿದ್ದರು.


Chief Minister Siddaramaiah's legal advisor is Virajpet Congress MLA A. S. Ponnanna has been appointed.
 Ponnanna is a former Jana Sangh, Janata Party President late A. K. Son of Subbaiah. Subbaiah was one of the prominent leaders of the state in the 70s. Subbaiah, who entered politics from Jana Sangh roots, had fought inside and outside the House against the then ruling party's Rolex watch scam.

 He came out of the party and formed his own Kannada Nadu Party, alleging that there was a sanctum sanctorum culture in the Jana Sangh and the BJP. He was a bitter critic of BJP and Sangh Parivar. Subbaiah was famous for his direct speech.

Post a Comment

Previous Post Next Post
Focus News 18

Contact Form