Focus News 18

Bengaluru - ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್​ಗೆ ಮತ್ತೆ ರಿಲೀಫ್: ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್

ಬೆಂಗಳೂರು: ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನದ ಆರೋಪ ಹೊತ್ತುಕೊಂಡಿರುವ ನಟ ಚೇತನ್ ಅಹಿಂಸಾ ಅವರ ಸಾಗರೋತ್ತರ ಭಾರತೀಯ ಪೌರತ್ವ ಕಾರ್ಡ್ ರದ್ದುಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ವಿಸ್ತರಣೆ ಮಾಡಿದೆ.

ಆ ಮೂಲಕ ಗಡಿಪಾರು ಭೀತಿಯಲ್ಲಿದ್ದ ಚೇತನ್​ಗೆ ಕರ್ನಾಟಕ ಹೈಕೋರ್ಟ್ ಮತ್ತೆ ರಿಲೀಫ್ ಸಿಕ್ಕಂತಾಗಿದೆ.

ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನದ ಆರೋಪ ಹಾಗೂ ಭಾರತ ವಿರೋಧಿ ಚಟುವಟಿಕೆ ಆರೋಪಗಳಿರುವ ಹಿನ್ನೆಲೆ ಕೇಂದ್ರ ಸರ್ಕಾರ ನೋಟಿಸ್ ನೀಡಿ ಉತ್ತರ ಪಡೆದಿತ್ತು. ಆದರೆ ಚೇತನ್ ಅವರಿಂದ ಸಮಾಧಾನಕರ ಉತ್ತರ ಸಿಗದ ಹಿನ್ನೆಲೆ 2018 ರಲ್ಲಿ ನೀಡಿದ್ದ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು.

ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಚೇತನ್ ಅಹಿಂಸಾ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ಕೋರ್ಟ್ ಏ.21 ರಂದು ಚೇತನ್​ಗೆ ಷರತ್ತುಬದ್ಧ ರಿಲೀಫ್ ನೀಡಿತ್ತು. ನ್ಯಾಯಾಂಗದ ಬಗ್ಗೆ ನಟ ಚೇತನ್ ಟ್ವೀಟ್ ಮಾಡುವಂತಿಲ್ಲ, ಬಾಕಿಯಿರುವ ಕೇಸ್​​ಗಳ ಬಗ್ಗೆಯೂ ಟ್ವೀಟ್ ಮಾಡುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿತ್ತು. ಅದರಂತೆ, ಷರತ್ತು ಪಾಲಿಸಿ ಟ್ವೀಟ್ ಡಿಲೀಟ್ ಮಾಡಿರುವುದಾಗಿ ವಕೀಲರು ಕೋರ್ಟ್ ಮುಂದೆ ಹೇಳಿದ್ದಾರೆ.

ವಾದ ಆಲಿಸಿದ ಹೈಕೋರ್ಟ್, ಈ ಹಿಂದೆ ನೀಡಿದ್ದ ಮಧ್ಯಂತ ತಡೆಯಾಜ್ಞೆಯನ್ನು ಜೂನ್ 20ರ ವರೆಗೆ ವಿಸ್ತರಿಸಿ ಆದೇಶಿಸಿದೆ. ಅಲ್ಲದೆ, ಚೇತನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ


Bengaluru: The Karnataka High Court has extended an interim stay on the central government's order canceling the overseas Indian citizenship card of actor Chetan Ahimsa, who has been accused of inciting communal hatred.

 Thus, Karnataka High Court again got relief for Chetan, who was in danger of deportation.

 The central government had issued a reply against the background of allegations of trying to create hatred between communities and allegations of anti-India activities. But the central government had canceled the Overseas Citizen of India card issued in 2018 after not getting a satisfactory answer from Chetan.

 Chetan Ahimsa had approached the Karnataka High Court against the central government's move. Accordingly, the court gave conditional relief to Chetan on A.21. The court has stipulated that actor Chetan cannot tweet about the judiciary, nor can he tweet about pending cases. Accordingly, the lawyer told the court that the tweet was deleted as per the clause policy.

 After hearing the arguments, the High Court extended the earlier interim injunction till June 20. Also, Chetan has given notice to the government to object to the application

Post a Comment

Previous Post Next Post
Focus News 18

Contact Form