Focus News 18

Chamarajanagar - ಲಂಚಕ್ಕೆ ಬೇಡಿಕೆ ಇಟ್ಟ ಲೋಕೋಪಯೋಗಿ ಇಲಾಖೆಯ ಇಬ್ಬರು ಇಂಜಿನಿಯರ್ಗಳು ಲೋಕಾಯುಕ್ತ ಬೆಲೆಗೆ

ಚಾಮರಾಜನಗರ: ಶಾಲಾ ಕಟ್ಟಡ ಕಾಮಗಾರಿಗೆ ಗುತ್ತಿಗೆದಾರರಿಗೆ ಬಿಲ್ ಮಂಜೂರು ಮಾಡಿಕೊಡಲು 30 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನಗರದ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಮಧುಸೂದನ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆಂಪರಾಜು ಅವರು ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ


ತಾಲೂಕಿನ ಬಾಗಳಿ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡದ ಕಾಮಗಾರಿಯನ್ನು ಸೂರ್ಯ ಬಿಲ್ಡರ್‌ನ ಸುನೀಲ್‌ಕುಮಾರ್ ಎಂಬ ಗುತ್ತಿಗೆದಾರರು ನಿರ್ವಹಿಸಿದ್ದರು. ಈ ಕಾಮಗಾರಿಯ ಬಿಲ್ ಹಣವನ್ನು ಮಂಜೂರು ಮಾಡಿಕೊಡಲು ಇಬ್ಬರೂ ಅಧಿಕಾರಿಗಳು ಸುನೀಲ್ ಕುಮಾರ್ ಅವರಿಂದ 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶುಕ್ರವಾರ ಸಂಜೆ ಲಂಚ ಸ್ವೀಕರಿಸುವಾಗ ಇಬ್ಬರನ್ನೂ ಕುದೇರು ಬಳಿ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.


Chamarajanagar: 30 thousand rupees to sanction the bill to the contractor for school building work. Assistant Engineer and Assistant Executive Engineer of Public Works Department who were accepting bribes have fallen into the trap of Lokayukta Police.

 City Public Works Department Assistant Engineer Madhusudan and Assistant Executive Engineer Kemparaju were caught taking bribes and arrested by the Lokayukta Police.


 The work of the government school building in Bagali village of the taluk was carried out by a contractor named Sunil Kumar of Surya Builder. 30 thousand rupees from Sunil Kumar to sanction the bill money for this work. He demanded a bribe. The Lokayukta police said that both were arrested near Kuderu while accepting bribes on Friday evening.

Post a Comment

Previous Post Next Post
Focus News 18

Contact Form