Focus News 18

Chikkamangaluru - ಚಿಕ್ಕಮಗಳೂರು: ಶಾಸಕರ ಅಭಿನಂದನಾ ಸಮಾರಂಭದಲ್ಲೇ ಯುವಕನ ಬರ್ಬರ ಹತ್ಯೆ

ಚಿಕ್ಕಮಗಳೂರು: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.

ವರುಣ್(28) ಮೃತ ಯುವಕ. ತರೀಕೆರೆ ಶಾಸಕ ಶ್ರೀನಿವಾಸ್​ಗೆ ಅಭಿಮಾನಿಗಳು ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಈ ಆರ್ಕೆಸ್ಟ್ರಾದಲ್ಲಿ ಹಾಡು ಬದಲಿಸುವ ವಿಚಾರದಲ್ಲಿ ಕಬಾಬ್ ಮೂರ್ತಿ ಹಾಗೂ ವರುಣ್ ಎಂಬುವವರ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಬಳಿಕ ಆರ್ಕೆಸ್ಟ್ರಾ ಮುಗಿಯುತ್ತಿದ್ದಂತೆಯೇ ಕಬಾಬ್ ಮೂರ್ತಿ ವರುಣ್​ಗೆ ಡ್ರ್ಯಾಗರ್​ನಿಂದ ಇರಿದು ಹತ್ಯೆಗೈದಿದ್ದಾನೆ.

ಈ ವೇಳೆ ಮಂಜು ಹಾಗೂ ಸಂಜು ಎಂಬಿಬ್ಬರ ಕೈ ಹಾಗೂ ಕಾಲಿಗೆ ಚಾಕು ಇರಿತದ ಗಾಯಗಳಾಗಿದೆ.

ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


Chikkamagaluru: A young man was brutally murdered during a felicitation ceremony for a Congress MLA in Tarikere town of the district.

 Varun (28) is the deceased youth. Fans organized a felicitation ceremony for Tarikere MLA Srinivas. Kabab Murthy and Varun clashed over changing the song in this orchestra. At this time word of mouth grew and a clash took place between the two groups. Later, just as the orchestra was over, Kabab Murthy Varun was stabbed to death with a dragger.

 Manju and Sanju got stab wounds on their hands and legs.

 SP Uma Prashant visited the place and inspected and registered a case.

Post a Comment

Previous Post Next Post
Focus News 18

Contact Form