Focus News 18

Free Bus: ಭಾನುವಾರ ಮಧ್ಯಾಹ್ನದಿಂದ ಮಹಿಳೆಯರಿಗೆ ಉಚಿತ ಬಸ್​​ ಪ್ರಯಾಣ ಆರಂಭ! ಎಲ್ಲೆಲ್ಲಿ ಪ್ರಯಾಣ ಮಾಡಬಹುದು?

ಉಚಿತ ಪ್ರಯಾಣದಲ್ಲಿ 6 ರಿಂದ 8 ವರ್ಷದ ಮಕ್ಕಳೂ ಒಳಗೊಂಡಿರುತ್ತಾರೆ. ಬಸ್ ನಿಲ್ದಾಣಗಳಲ್ಲಿ ಮಹಿಳೆಯರನ್ನು ಹತ್ತಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ

ಬೆಂಗಳೂರು: ಗ್ಯಾರಂಟಿ ಗೊಂದಲಗಳಿಗೆ ಒಂದೊಂದಾಗಿ ತೆರೆ ಎಳೆಯಲು ರಾಜ್ಯ ಕಾಂಗ್ರೆಸ್​ ಸರ್ಕಾರ ಮುಂದಾಗಿದೆ. ಇದರಂತೆ ಮೊದಲ ಗ್ಯಾರಂಟಿ ಜಾರಿಗೆ ಸಾರಿಗೆ ಇಲಾಖೆ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಇದೇ ಭಾನುವಾರ ಶಕ್ತಿ ಯೋಜನೆ ಜಾರಿ ಬರಲಿದೆ.


ಜೂನ್​​11ರ ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ಈ ಯೋಜನೆ ಜಾರಿ ಬರಲಿದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ.

ಶಕ್ತಿ ಯೋಜನೆಯಡಿ ಕರ್ನಾಟಕಾದ್ಯಂತ ಉಚಿತ ಪ್ರಯಾಣ ನಡೆಸಲು ಬಿಎಂಟಿಸಿ ಸೇರಿ ಎಲ್ಲಾ ಸಾರಿಗೆ ಸಂಸ್ಥೆಗಳಿಗೆ ಸರ್ಕಾರದಿಂದ ಆದೇಶ ಹೊರಡಿಸಿದ್ದು, ರಾಜಹಂಸ, ಐಷಾರಾಮಿ, ಎಸ್ ಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಗಳಲ್ಲಿ ಉಚಿತ ಪ್ರಯಾಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಸಾಮಾನ್ಯ ಸಾರಿಗೆ, ವೇಗದೂತಗಳಲ್ಲಿ ಮಾತ್ರ ಉಚಿತ ಪ್ರಯಾಣ ಸೇವೆ ಲಭ್ಯವಾಗಲಿದ್ದು, ಶಕ್ತಿ ಸ್ಮಾರ್ಟ್ ಬರೋವರೆಗೆ ಸರ್ಕಾರಿ ಗುರುತಿನ ಚೀಟಿ ಕಂಡೆಕ್ಟರ್​​ಗೆ ತೋರಿಸುವುದು ಕಡ್ಡಾಯವಾಗಿದೆ.


ಉಚಿತ ಪ್ರಯಾಣ ಯೋಜನೆ ಯ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ. ಹೀಗಾಗಿ ಕಂಡೆಕ್ಟರ್ ಮಹಿಳಾ ಪ್ರಯಾಣಿಕರಿಗೆ ಪ್ರಯಾಣದ ಚೀಟಿಯನ್ನು ನೀಡುವುದು ಕಡ್ಡಾಯ ಮಾಡಲಾಗಿದೆ.

ಉಳಿದಂತೆ ಮಹಿಳಾ ಪ್ರಯಾಣಿಕರು ಹೆಚ್ಚುವರಿ ಲಗೇಜ್ ಕೊಂಡು ಹೋದಲ್ಲಿ ಅದರ ಮೊತ್ತವನ್ನು ಪಾವತಿ ಮಾಡಬೇಕು. ಅಂತರ ರಾಜ್ಯ ಸಾರಿಗೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಇದೇ ವೇಳೆ ಮಹಿಳಾ ಪ್ರಯಾಣಿಕರೊಂದಿಗೆ ಚಾಲಕರು, ನಿರ್ವಾಹಕರು‌ ಸೌಜನ್ಯದಿಂದ ವರ್ತಿಸಬೇಕು ಸೂಚನೆ ನೀಡಿದೆ.

ಉಚಿತ ಪ್ರಯಾಣದಲ್ಲಿ 6 ರಿಂದ 8 ವರ್ಷದ ಮಕ್ಕಳೂ ಒಳಗೊಂಡಿರುತ್ತಾರೆ. ಸಾಂದರ್ಭಿಕ‌ ಒಪ್ಪಂದ, ಖಾಯಂ ಗುತ್ತಿಗೆಗೆ ಪಡೆದ ಬಸ್​​ಗಳಲ್ಲಿ ಉಚಿತ ಪ್ರಯಾಣ ಅನ್ವಯವಾಗುವುದಿಲ್ಲ. ಬಸ್ ನಿಲ್ದಾಣಗಳಲ್ಲಿ ಮಹಿಳೆಯರನ್ನು ಹತ್ತಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

Post a Comment

Previous Post Next Post
Focus News 18

Contact Form