Focus News 18

Kalaburagi - ಕೆಲವೇ ದಿನಗಳಲ್ಲಿ 7ನೇ ಗ್ಯಾರಂಟಿ ಕೂಡಾ ಜಾರಿಯಾಗುತ್ತೆ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಾಂಗ್ರೆಸ್​​ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾರೆಲ್ಲ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದರೋ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಆರನೇ ಗ್ಯಾರಂಟಿಯನ್ನು ಇತ್ತೀಚೆಗೆ ಘೋಷಣೆ ಮಾಡಿದ್ದರು. ಆದರೆ ರಾಜ್ಯದಲ್ಲಿ ಕೆಲವೇ ದಿನದಲ್ಲಿ ಏಳನೇ ಗ್ಯಾರಂಟಿ ಕೂಡಾ ಜಾರಿಯಾಗುತ್ತೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಗರದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಶಿಯಲ್ ಮೀಡಿಯಾದಲ್ಲಿ ಹಾರಾಡುವವರ ವಿರುದ್ದ ಮತ್ತು ಸುಳ್ಳು ಸುದ್ದಿ ಹರಿಬಿಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪ್ರಿಯಾಂಕ್ ಖರ್ಗೆ ವಿದ್ಯಾರ್ಹತೆ ಬಗ್ಗೆ ತೇಜಸ್ವಿ ಸೂರ್ಯ ಪ್ರಶ್ನೆ ವಿಚಾರವಾಗಿ ಮಾತನಾಡಿ, ನನ್ನ ವಿದ್ಯಾರ್ಹತೆ ನನ್ನ ಅಫಿಡವಿಟ್​ನಲ್ಲಿದೆ. ನಾನು ಮಾಡಿರುವ ವಿದ್ಯಾಭ್ಯಾಸ ಅವರಿಗೆ ತಿಳಿಯದೇ ಇರಬಹುದು. ನನ್ನ ಬಗ್ಗೆ ಕಾಳಜಿ ಇರೋರು ಅವರ ಸುಪ್ರೀಂ ಲೀಡರ್ ವಿದ್ಯಾರ್ಹತೆ ಬಗ್ಗೆ ತಿಳಿದುಕೊಳ್ಳಲಿ. ಯಾರಾದರೂ ಪ್ರಧಾನಿ ಡಿಗ್ರಿ ಬಗ್ಗೆ ಆರ್​ ಟಿಐನಲ್ಲಿ ಕೇಳಿದರೆ ಕೊಡಬೇಡಿ ಅಂತ ಹೇಳಿದ್ದಾರೆ. ನಾನು ಚುನಾಯಿತ ಪ್ರತಿನಿಧಿ, ಜನ ಆಯ್ಕೆ ಮಾಡಿದ್ದಾರೆ ಎಂದು ಕಿಡಿಕಾರಿದರು.

Kalaburagi: Rural Development Minister Priyank Kharge recently announced his sixth guarantee saying that as soon as the Congress government comes to power, action will be taken ruthlessly against those who are involved in corruption in Kalyana Karnataka. But Priyank Kharge said that the seventh guarantee will also be implemented in the state in a few days.

 Speaking to the media after launching Shakti Yojana in the city, he said that action will be taken against those who fly on social media and those who spread false news.

 Regarding Priyank Kharge's qualification, Tejaswi Surya's question, my qualification is in my affidavit. They may not know the education I have done. Let me know about Iroru's Supreme Leader Qualification. If someone asks about PM's degree in RTI, he said not to give it. I am an elected representative, elected by the people, he shouted.

Post a Comment

Previous Post Next Post
Focus News 18

Contact Form