Focus News 18

Kalaburgi - ಅಕ್ರಮ ಮರಳು ಸಾಗಾಟ ತಡೆಯಲು ಹೋದ ಹೆಡ್ಕಾನ್ ಸ್ಟೇಬಲ್ ಭೀಕರ ಹತ್ಯೆ

ಕಲಬುರಗಿ: ಭೀಮಾ ತೀರದಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಹೋದ ಹೆಡ್​​ಕಾನ್​ಸ್ಟೇಬಲ್ ಹತ್ಯೆಗೀಡಾಗಿದ್ದಾರೆ.

ಟ್ರ್ಯಾಕ್ಟರ್​ ಹರಿಸಿ, ಹೆಡ್​​ ಕಾನ್​ಸ್ಟೇಬಲ್​ ​ಮೈಸೂರ್ ಚೌಹಾಣ್ ​(51) ಅವರನ್ನು ಹತ್ಯೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಈ ಘಟನೆ ನಡೆದಿದ್ದು, ಅಕ್ರಮ ಮರಳು ಸಾಗಾಟ ಹಿನ್ನೆಲೆಯಲ್ಲಿ ನಿನ್ನೆ ಗುರುವಾರ ರಾತ್ರಿ 10ರ ಸುಮಾರಿಗೆ ಚೌಹಾಣ್ ಅವರು ತಪಾಸಣೆಗೆ ಹೋಗಿದ್ದರು.

ಆ ವೇಳೆ ದುಷ್ಕರ್ಮಿಗಳು ಬೈಕ್​​ನಲ್ಲಿ ಹೋಗುತ್ತಿದ್ದ ಮೈಸೂರ್​​ ಚೌಹಾಣ್​ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾರೆ. ಮೈಸೂರ್ ಚೌಹಾನ್ ಅವರು ಟ್ರ್ಯಾಕ್ಟರ್​ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚೌಹಾಣ್ ಅವರು ನೆಲೋಗಿ ಠಾಣೆಯಲ್ಲಿ ಹೆಡ್ ಕಾನ್​​​ಸ್ಟೇಬಲ್​​ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪೂರ್ ತಾಂಡಾ ನಿವಾಸಿಯಾಗಿದ್ದರು. ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Kalaburagi: A head constable who went to stop illegal sand transport along the Bhima coast was killed.

 Head Constable Mysore Chauhan (51) was killed by the tractor. The incident took place near Narayanpur in Jewargi taluk of Kalaburagi district. Chauhan had gone to check on illegal sand transport yesterday around 10 pm.

 At that time, the miscreants ran a tractor over Mysore Chauhan who was riding a bike. Mysore Chauhan was hit by the wheel of the tractor and died on the spot. Chauhan was serving as head constable in Nelogi police station. He was a resident of Chaudapur Tanda in Afazalpur Taluk of Kalaburagi District. The incident took place in Nelogi police station.

Post a Comment

Previous Post Next Post
Focus News 18

Contact Form