Focus News 18

Kolkatta - ಕೋಲ್ಕತ್ತಾದ ನೇತಾಜಿ ಸುಭಾಷ್​ಚಂದ್ರ ಬೋಸ್​ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ಬೆಂಕಿ, ಪ್ರಯಾಣಿಕರ ಸ್ಥಳಾಂತರ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಚೆಕ್​ ಇನ್​ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಸ್ವಲ್ಪ ಸಮಯದಲ್ಲೇ ಹತೋಟಿಗೆ ತಂದಿದ್ದಾರೆ. ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದಕ್ಕೂ ಮುನ್ನ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಕೋಲ್ಕತ್ತಾ ವಿಮಾನ ನಿಲ್ದಾಣದ 3C ನಿರ್ಗಮನ ಟರ್ಮಿನಲ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದು ಇನ್ನೂ ತಿಳಿದಿಲ್ಲ. ಅದನ್ನು ಪರಿಶೀಲಿಸಲಾಗುತ್ತಿದೆ.


ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಪ್ರಕಾರ, ಚೆಕ್-ಇನ್ ಏರಿಯಾ ಪೋರ್ಟಲ್ ಡಿ ನಲ್ಲಿ ರಾತ್ರಿ 9.12 ಕ್ಕೆ ಸಣ್ಣ ಬೆಂಕಿ ಕಾಣಿಸಿಕೊಂಡಿತು ಬೆಂಕಿ ಉಲ್ಬಣವಾಗುತ್ತಿದ್ದಂತೆ ಅಗ್ನಿ ಶಾಮಕ ದಳವು ಬೆಂಕಿಯನ್ನು 9.40ರ ವೇಳೆಗೆ ಸಂಪೂರ್ಣವಾಗಿ ಹತೋಟಿಗೆ ತಂದಿತು.

ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಮತ್ತು ಚೆಕ್-ಇನ್ ಪ್ರದೇಶದಲ್ಲಿ ಹೊಗೆಯಿಂದಾಗಿ ಚೆಕ್-ಇನ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಚೆಕ್-ಇನ್ ಮತ್ತು ಕಾರ್ಯಾಚರಣೆಗಳು ಇದೀಗ ಪುನರಾರಂಭಗೊಂಡಿವೆ.

ಸಿಐಎಸ್ಎಫ್ ಪ್ರಕಾರ, ಡಿ ಪೋರ್ಟಲ್ ಚೆಕ್-ಇನ್ ಕೌಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹೊಗೆಯಿಂದಾಗಿ ಟರ್ಮಿನಲ್ ಕಟ್ಟಡದಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು. ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಬೆಂಕಿಯನ್ನು ನಂದಿಸಲಾಗಿದೆ. ಸಾಮಾನ್ಯ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ.

Kolkata: A fire broke out at the Netaji Subhash Chandra Bose International Airport in West Bengal's Kolkata on Wednesday night. After the fire broke out in the check-in area, the fire brigade immediately reached the spot and brought the fire under control in no time. No loss of life has been reported. Earlier, all the passengers were evacuated safely.

 An airport official said the fire broke out in the departure terminal building 3C of the Kolkata airport. According to officials, it is not yet known how the fire started. It is being checked.


 According to the Airports Authority of India, a small fire broke out at check-in area portal D at 9.12 pm as the fire escalated and the fire brigade brought the fire under control by 9.40 pm.

 All passengers were evacuated safely and the check-in process was halted due to smoke in the check-in area. Check-in and operations have now resumed.

 According to CISF, the fire broke out at the D Portal check-in counter. Passengers and staff were evacuated from the terminal building due to smoke. No injuries were reported. The fire has been extinguished. Normal operations have resumed.


Post a Comment

Previous Post Next Post
Focus News 18

Contact Form