Focus News 18

London - ಲಂಡನ್‌ನಲ್ಲಿ ‘ಗವರ್ನರ್ ಆಫ್ ದಿ ಇಯರ್’ ಪ್ರಶಸ್ತಿ ಸ್ವೀಕರಿಸಿದ RBI ಗವರ್ನರ್ ಶಕ್ತಿಕಾಂತ ದಾಸ್

ಲಂಡನ್: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ಲಂಡನ್‌ನ ಸೆಂಟ್ರಲ್ ಬ್ಯಾಂಕಿಂಗ್ ಅವಾರ್ಡ್ಸ್ 2023 ರಲ್ಲಿ ‘ವರ್ಷದ ಗವರ್ನರ್’ (Governor of the Year) ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. 

ಸೆಂಟ್ರಲ್ ಬ್ಯಾಂಕಿಂಗ್ ಅವಾರ್ಡ್ಸ್ 2023 ಪ್ರಶಸ್ತಿ ವಿಜೇತರನ್ನು ಈ ವರ್ಷದ ಮಾರ್ಚ್ ಅಂತ್ಯದಲ್ಲಿ ಘೋಷಿಸಲಾಗಿತ್ತು. ನ್ಯಾಷನಲ್ ಬ್ಯಾಂಕ್ ಆಫ್ ಉಕ್ರೇನ್ ಗೆ 2023 ರ ‘ಸೆಂಟ್ರಲ್ ಬ್ಯಾಂಕ್ ಆಫ್ ದಿ ಇಯರ್’ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ‘ಗವರ್ನರ್ ಆಫ್ ದಿ ಇಯರ್’ ಪ್ರಶಸ್ತಿ ಲಭಿಸಿದೆ

ಶಕ್ತಿಕಾಂತ ದಾಸ್ (ನಿವೃತ್ತ IAS ಅಧಿಕಾರಿ) ಡಿಸೆಂಬರ್ 12, 2018 ರಂದು ಭಾರತೀಯ ರಿಸರ್ವ್ ಬ್ಯಾಂಕ್‌ನ 25 ನೇ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡರು. ಇದಕ್ಕಿಂತ ಮೊದಲು ಅವರು ಭಾರತದ 15 ನೇ ಹಣಕಾಸು ಆಯೋಗದ ಮುಖ್ಯಸ್ಥ ಮತ್ತು G20 ಶೆರ್ಪಾ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.

ತಮ್ಮ 40 ವರ್ಷಗಳ ವೃತ್ತಿಜೀವನದಲ್ಲಿ ದಾಸ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹಣಕಾಸು, ತೆರಿಗೆ, ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಹಣಕಾಸು ಸಚಿವಾಲಯದಲ್ಲಿ ಅವರ ಸುದೀರ್ಘ ಅಧಿಕಾರಾವಧಿಯಲ್ಲಿ, ಅವರು ಎಂಟು ಕೇಂದ್ರ ಬಜೆಟ್‌ಗಳ ತಯಾರಿಕೆಯಲ್ಲಿ ನೇರವಾಗಿ ಸಂಬಂಧ ಹೊಂದಿದ್ದರು. ಅವರು IMF, G20, BRICS, SAARC ಮುಂತಾದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಶಕ್ತಿಕಾಂತ ದಾಸ್ ಅವರು ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ


London: Reserve Bank of India (RBI) Governor Shaktikanta Das has received the 'Governor of the Year' award at the Central Banking Awards 2023 in London.

 The winners of the Central Banking Awards 2023 were announced at the end of March this year. National Bank of Ukraine has been awarded 'Central Bank of the Year' for 2023 and Reserve Bank of India Governor Shaktikanta Das has been awarded 'Governor of the Year'.

 Shaktikanta Das (retired IAS officer) took over as the 25th Governor of the Reserve Bank of India on December 12, 2018. Prior to this he served as the Chairman of the 15th Finance Commission of India and a member of the G20 Sherpa.

 In his 40-year career, Das has held key positions in the central and state governments in finance, taxation, industries and infrastructure.

 During his long tenure in the Finance Ministry, he was directly associated with the preparation of eight Union Budgets. He has represented India in international forums like IMF, G20, BRICS, SAARC etc. Shaktikanta Das holds a Master's degree from St. Stephen's College, University of Delhi

Post a Comment

Previous Post Next Post
Focus News 18

Contact Form