Focus News 18

Madhugiri - ವಾಹನ ಸವರನ ಮೇಲೆ ಕರಡಿ ದಾಳಿ, ಕುರಿಗಾಹಿಗಳಿಂದ ರಕ್ಷಣೆ

ಮಧುಗಿರಿ : ಕರಡಿ ದಾಳಿಗೆ ಒಳಗಾಗಿ ಗಾಯಗೊಂಡು ಪ್ರಗ್ನೆ ತಪ್ಪಿದ ದ್ವಿಚಕ್ರ ವಾಹನ ಸವಾರರನ್ನು ಕುರಿಗಾಹಿಗಳು ರಕ್ಷಿಸಿ ಆಸ್ಪತ್ರೆಗೆ ಸೇರಿಸಿರುವ ಘಟನೆ ನಡೆದಿದೆ.

ತಾಲೂಕಿನ ಮಿಡಗೇಶಿ ಹೋಬಳಿಯ ಹನುಮಂತಪುರದ ವಾಸಿ ಈರಣ್ಣ ( ಕೃಷ್ಣ)38 ಮಿಡಗೇಶಿಯಿಂದ ಲಕ್ಲಿಹಟ್ಟಿಗೆ ಹನುಮಂತಪುರ ಮಾರ್ಗವಾಗಿ ಶುಕ್ರವಾರ ಸಂಜೆ ಸುಮಾರು 6:30ರ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಈರಣ್ಣ ಬೆಟ್ಟದ ಹತ್ತಿರ ಎರಡು ಕರಡಿಗಳು ಪ್ರತ್ಯಕ್ಷವಾಗಿದ್ದವು ಇದರಲ್ಲಿ ದೊಡ್ಡ ಕರಡಿ ಹಲ್ಲೆ ಮಾಡಿದ್ದು ಗಾಬರಿಗೊಂಡ ದ್ವಿ ಚಕ್ರವಾಹನ ಸವಾರ ವಾಹ ದಿಂದ ನೆಲಕ್ಕೆ ಬಿದ್ದು ತಲೆಗೆ ಹಾಗೂ ಕೈಗೆ ಪೆಟ್ಟು ಮಾಡಿಕೊಂಡು ಅನ್ಯರ ಸಹಾಯದಿಂದ ಮಿಡಿಗೇಶಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆ ಸೇರಿದ್ದರು.

ಶನಿವಾರ ಸಂಜೆ ವಾಹನ ಸವಾರನ ಆರೋಗ್ಯ ದಲ್ಲಿ ಏರುಪೇರಾಗಿದ್ದರಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಗೆ ಚಿಕಿತ್ಸೆ ಗಾಗಿ ದಾಖಲಾಗಿದ್ದರು, ತಪಾಸಣೆ ನಡೆಸಿದ ವೈದ್ಯರು ಹೆಚ್ಚುವರಿ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು, ವಿಷಯ ತಿಳಿದ ಅರಣ್ಯಾಧಿಕಾರಿ ಮುತ್ತುರಾಜ್ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ವಿವರಗಳನ್ನು ಕಲೆಹಾಕಿದ್ದಾರೆ.
Madhugiri: A two-wheeler rider who was injured and passed out after being attacked by a bear has been rescued by shepherds and taken to hospital.

 Eranna (Krishna) 38, a resident of Hanumanthapura, Hobali, Midageshi, taluk, was traveling from Midageshi to Laklihatti via Hanumantpura on a two-wheeler on Friday evening at around 6:30 p.m. when two bears were seen near Eranna Hill in the middle of the road. u With the help of others, Midigeshi received first aid at the primary hospital and went home.

 On Saturday evening, the rider's health deteriorated and he was admitted to the town's public hospital for treatment. The doctor who conducted the check-up sent him to the district hospital in Tumkur for additional treatment. Forest Officer Muthuraj visited the hospital and gathered details about the incident.

Post a Comment

Previous Post Next Post
Focus News 18

Contact Form