Focus News 18

Mysur - ಕೋಪದಲ್ಲಿ ಅಜ್ಜಿ ಕೊಂದು, ಹೆಣ ಸುಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ ಮೊಮ್ಮಗ

ಮೈಸೂರು ; ಕೋಪದಿಂದ ತಳ್ಳಿ ಅಜ್ಜಿಯನ್ನು ಕೊಂದ ಮೊಮ್ಮಗ ಕೊರಿಯನ್ ವೆಬ್ ಸೀರಿಸ್ ನೋಡಿ ಹೆಣ ಸುಟ್ಟು ಬಚಾವಾಗಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.


ಮೈಸೂರಿನ ಗಾಯತ್ರಿಪುರಂ ನಿವಾಸಿ ಸುಲೋಚನ (75) ಮೃತ ಅಜ್ಜಿ. ಸುಪ್ರೀತ್ (23) ಅಜ್ಜಿ ಕೊಂದ ಮೊಮ್ಮಗನು. ಹೆಣವನ್ನು ಪ್ಯಾಕ್ ಮಾಡಿ ಕಾರಿನಲ್ಲಿಟ್ಟುಕೊಂಡು ದಿನವಿಡೀ ಓಡಾಡಿದ್ದಾನೆ. ಅಜ್ಜಿ ಹೆಣ ಕಾರಿನಲ್ಲೇ ಇಟ್ಟುಕೊಂಡು ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದ. ನಂತರ ಮಾತಿನ ವರಸೆ ಬದಲಿಸಿ ಕಡೆಗೆ ಪೊಲೀಸರ ಮುಂದೆ ಸಿಕ್ಕಿಬಿದ್ದಿದ್ದಾನೆ.
ಕೆಆರ್‌ಎಸ್ ಹಿನ್ನೀರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಸಿಕ್ಕ ಪ್ರಕರಣ ಭೇದಿಸಿದ ಮೈಸೂರು ಪೊಲೀಸರಿಗೆ, ಸ್ವಂತ ಅಜ್ಜಿಯನ್ನು ಮೊಮ್ಮಗನೇ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ.

ಗುರುತು ಸಿಗದಂತೆ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಮೇ 28 ರಂದು ಮನೆಯಲ್ಲಿ ಹೊಡೆದು ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಯುವಕ. ಮೃತದೇಹದ ತಲೆ ಕೂದಲು ಹಾಗೂ ಕನ್ನಡಕದಿಂದ ಮೈಸೂರು ದಕ್ಷಿಣ ಠಾಣೆ ಪೊಲೀಸರು ತನಿಖೆ ನಡೆಸಿದ್ದರು.
ನಜರ್‌ಬಾದ್ ಠಾಣೆಯಲ್ಲಿ ದಾಖಲಾಗಿದ್ದ ಮಿಸ್ಸಿಂಗ್ ಕಂಪ್ಲೆಂಟ್ ಜೊತೆಗೆ ಸಾಮ್ಯತೆ ಕಂಡ ಪೊಲೀಸರು ಆರೋಪಿ ಸುಪ್ರೀತ್‌ ನನ್ನು ವಿಚಾರಣೆಗೆ ಒಳಪಡಿಸಿದಾಗ, ಅಜ್ಜಿ ಸುಲೋಚನ ಬೈಯುತ್ತಿದ್ದರು. ಹಾಗಾಗಿ ಹತ್ಯೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ.


ಅಜ್ಜಿಯನ್ನು ಹತ್ಯೆ ಮಾಡಿದ ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ, ರಟ್ಟಿನ ಬಾಕ್ಸ್‌ ನಲ್ಲಿ ಹಾಕಿದ್ದ. ಕಾರಿನಲ್ಲಿ ಕೆಆರ್‌ ಎಸ್ ಹಿನ್ನೀರು ಪ್ರದೇಶಕ್ಕೆ ಕೊಂಡೊಯ್ದು ಗುಂಡಿಯಲ್ಲಿ ಹಾಕಿ ಶವವನ್ನು ಸುಟ್ಟು ಹಾಕಿದ್ದಾನೆ. ಈ ಸಂಬಂಧ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ರಚಿಸಿದ್ದ ತನಿಖಾ ತಂಡ ಒಂದು ವಾರದಲ್ಲಿ ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Mysore; An incident has taken place in Mysore where the grandson who pushed and killed his grandmother in anger tried to escape after watching a Korean web series and tried to escape by burning the blanket.


 Sulochana (75), a resident of Gayathripuram, Mysore, is the deceased grandmother. Supreet (23) is the grandson killed by his grandmother. He packed the bag and kept it in the car and drove around all day. Grandmother kept the trunk in the car and filed a missing complaint. Later, he changed his words and got caught in front of the police.
 The Mysore police, who cracked the case of a woman's body being found in a burnt condition in the KRS backwater, came to light of the shocking fact that her own grandmother had been killed by her grandson.

 A woman's body was found in a charred condition. A young man who was beaten and then suffocated with a pillow at home on May 28. Mysore Dakshina police investigated the dead body from the head hair and glasses.
 When the police interrogated the accused Supreet, seeing similarities with the missing complaint filed in the Nazarbad police station, the grandmother was begging for help. So he stated that he killed.


 After killing the grandmother, the body was wrapped in a plastic bag and put in a cardboard box. KRS took the car to the backwater area and put it in a pit and burnt the body. In this regard, the investigation team formed by Mysore District Superintendent of Police Seema Latkar managed to crack the case within a week and arrest the accused.

Post a Comment

Previous Post Next Post
Focus News 18

Contact Form