Focus News 18

New Delhi - ಮೇ ತಿಂಗಳಿನಲ್ಲಿ 1.57 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ: ಕರ್ನಾಟಕದ ಪಾಲೆಷ್ಟು?

ನವದೆಹಲಿ: ಮೇ ತಿಂಗಳಿನಲ್ಲಿ 1,57,090 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಸತತ 14 ತಿಂಗಳಿನಿಂದ ಜಿಎಸ್‌ಟಿ ಸಂಗ್ರಹ 1.50 ಲಕ್ಷ ಕೋಟಿ ರೂ. ದಾಟುತ್ತಿರುವುದು ಇದೇ ಮೊದಲು.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ 12% ರಷ್ಟು ಏರಿಕೆಯಾಗಿದೆ. ಕಳೆದ ಮೇ ತಿಂಗಳಿನಲ್ಲಿ 1,40,885 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ 1,87,035 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.

ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರ ಜಿಎಸ್‌ಟಿ (CGST) ಪಾಲು 28,411 ಕೋಟಿ ರೂ. ಆಗಿದ್ದರೆ ರಾಜ್ಯ ಜಿಎಸ್‌ಟಿ (SGST) 35,828 ಕೋಟಿ ರೂ. ಆಗಿದೆ. ಇಂಟಿಗ್ರೇಟೆಡ್ ಜಿಎಸ್‌ಟಿ (ಭಾರತಕ್ಕೆ ಆಮದು ಮಾಡಿಕೊಳ್ಳುವ ಮತ್ತು ಭಾರತದಿಂದ ರಫ್ತು ಮಾಡುವ ಸಂದರ್ಭಗಳಲ್ಲಿ ಸರಕು ಮೇಲೆ ಹಾಕುವ ತೆರಿಗೆ) 81,363 ಕೋಟಿ ರೂ.ಗಳಾಗಿವೆ. ಇದರಲ್ಲಿ 11,489 ಕೋಟಿ ರೂ.(ವಸ್ತುಗಳನ್ನು ಆಮದು ಮಾಡಿಕೊಂಡಿದ್ದಕ್ಕೆ 1,057 ಕೋಟಿ ರೂ. ಸಂಗ್ರಹ ಸೇರಿ) ಸೆಸ್‌ ಕೂಡ ಸೇರಿದೆ. 

ಇಂಟಿಗ್ರೇಟೆಡ್ ಜಿಎಸ್‌ಟಿಯಿಂದ ಕೇಂದ್ರ ಜಿಎಸ್‌ಟಿಗೆ 35,369 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 29,769 ಕೋಟಿ ರೂ. ವರ್ಗಾಯಿಸಲಾಗಿದೆ. ಈ ಹಂಚಿಕೆಯ ಬಳಿಕ ಮೇ ತಿಂಗಳಿನಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯ ಕ್ರಮವಾಗಿ 63,780 ಕೋಟಿ ರೂ. ಮತ್ತು 65,597 ಕೋಟಿ ರೂ.ಗಳಾಗಿವೆ.

ಕರ್ನಾಟಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 12% ರಷ್ಟು ಏರಿಕೆಯಾಗಿದ್ದು, 10,317 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿ ಎರಡನೇ ಸ್ಥಾನ ಪಡೆದಿದೆ. ಕಳೆದ ಮೇ ತಿಂಗಳಿನಲ್ಲಿ 9,232 ಕೋಟಿ ರೂ. ಸಂಗ್ರಹವಾಗಿತ್ತು.

 ಮಹಾರಾಷ್ಟ್ರದಲ್ಲಿ 23,536 ಕೋಟಿ ರೂ. ಸಂಗ್ರಹವಾಗಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಗುಜರಾತ್‌ 9,800 ಕೋಟಿ ರೂ., ತಮಿಳುನಾಡು 8,953 ಕೋಟಿ ರೂ., ಉತ್ತರ ಪ್ರದೇಶದಲ್ಲಿ 7,468 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.

New Delhi: Rs 1,57,090 crore in the month of May. The Union Finance Ministry said that the Goods and Services Tax (GST) has been collected. GST collection for 14 consecutive months is Rs 1.50 lakh crore. This is the first time crossing.

 GST collection has increased by 12% compared to the same period last year. 1,40,885 crores in last May. GST was collected. 1,87,035 crore in April this year. GST was collected.

 The share of Central GST (CGST) in the total GST collection was Rs 28,411 crore. State GST (SGST) is Rs 35,828 crore. is Integrated GST (tax levied on goods imported into India and exported from India) is Rs 81,363 crore. This includes cess of Rs 11,489 crore (including collection of Rs 1,057 crore on imported goods).

 35,369 crore from Integrated GST to Central GST. and Rs 29,769 crore for state GST. Transferred. After this distribution, the total income of the Center and the states in the month of May was Rs 63,780 crore respectively. And 65,597 crores are Rs.

 In Karnataka, compared to last year, this time there has been an increase of 12% to Rs 10,317 crore. GST is second in collection. 9,232 crores in last May. was collected.

  23,536 crore in Maharashtra. It continues to be at the first position overall. Gujarat Rs 9,800 crore, Tamil Nadu Rs 8,953 crore, Uttar Pradesh Rs 7,468 crore. GST collected.

Post a Comment

Previous Post Next Post
Focus News 18

Contact Form