Focus News 18

New Delhi - ಕೋಮುವಾದಿಗಳನ್ನು ಜಾತ್ಯಾತೀತರೆಂದು ರಾಹುಲ್ ಗಾಂಧಿ ಬಣ್ಣಿಸುತ್ತಿರುವುದು ಹಾಸ್ಯಾಸ್ಪದ: ಪ್ರಲ್ಹಾದ ಜೋಶಿ

ಹೊಸದಿಲ್ಲಿ: ನೈಜ ಕೋಮುವಾದಿ ಗುಂಪುಗಳಿಗೆ ಜಾತ್ಯಾತೀತರು ಅಂತ ಟೈಟಲ್ ಕೊಟ್ಟು ಬಣ್ಣಿಸುತ್ತಿರುವ ರಾಹುಲ್ ಗಾಂಧಿ ನಡೆ ಹಾಸ್ಯಾಸ್ಪದವಾಗಿದ್ದು, ಅವರು ಇದಕ್ಕೆ ತಕ್ಷಣ ಅಂತ್ಯ ಹಾಡಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.

ವಿದೇಶಿ ನೆಲದಲ್ಲಿ ಹಿಂದುತ್ವ ಸಂಘಟನೆಗಳನ್ನು ಟೀಕಿಸಿರುವ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಲ್ಹಾದ್ ಜೋಶಿ, ರಾಹುಲ್ ಗಾಂಧಿ ಮೊದಲು ಯಾರು ಕೋಮುವಾದಿ, ಯಾರು ಜಾತ್ಯಾತೀತರು? ಎಂಬುದನ್ನ ಅರಿತಿಕೊಳ್ಳಲಿ ಎಂದಿದ್ದಾರೆ.


ದೇಶದಲ್ಲಿ ಕೋಮುವಾದವನ್ನು ಬಿತ್ತುತ್ತಿರುವ ನೈಜ ಕೋಮುವಾದಿ ಮುಸ್ಲಿಂ ಲೀಗ್ ಪಕ್ಷಗಳನ್ನು ಜಾತ್ಯಾತೀತರು ಎಂದು ನಕಲಿ ಗಾಂಧಿ ಬಣ್ಣಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ದೇಶದ ವಿಭಜನೆಗೆ ಹಾಗೂ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಪಕ್ಷದವರು ಜಾತ್ಯಾತೀತರು ಹೇಗೆ ಆಗುತ್ತಾರೆ? ಆ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡವರಿಗೆ ರಾಹುಲ್ ಗಾಂಧಿ ಮಾಡಿದ ಅತ್ಯಂತ ದೊಡ್ಡ ಅವಮಾನವಿದು. ಇವರ ತುಷ್ಟಿಕರಣದ ರಾಜಕೀಯಕ್ಕೆ ಕೊನೆಯೇ ಇಲ್ಲ ಎಂದು ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.‌

ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಪ್ರಲ್ಹಾದ್ ಜೋಶಿ, ಹಿಂದೂಗಳಷ್ಟು ಜಾತ್ಯಾತೀತರು ಯಾರಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಹಿಂದೂಗಳ ಯೋಚನೆಯಲ್ಲಿಯೇ ಜಾತ್ಯಾತೀತತೆ ಇದೆ. ಆದರೆ ರಾಹುಲ್ ಗಾಂಧಿ ಹಿಂದು ಸಂಘಟನೆಗಳು ಕೋಮುವಾದ ಬಿತ್ತುತ್ತಿವೆ ಎಂದಿದ್ದಾರೆ.

ಯಾರು ನಿಜವಾದ ಜಾತ್ಯಾತೀತರು ಹಾಗೂ ಯಾರು ಧರ್ಮಾಂಧ ಪಟ್ಟಭದ್ರ ಹಿತಾಸಕ್ತಿ ಹೊಂದಿದವರು ಎಂಬುದು ದೇಶದ ಜನ ಅರ್ಥಮಾಡಿಕೊಂಡಿದ್ದಾರೆ. ನಕಲಿ ಗಾಂಧಿಯ ಈ ತುಷ್ಠಿಕರಣದ ರಾಜನೀತಿ ದೇಶದಲ್ಲಿ ನಡೆಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.New Delhi: Union Parliamentary Affairs Minister Pralhad Joshi has demanded that Rahul Gandhi's act of labeling real communal groups as secular is ridiculous and he should put an end to it immediately.

 Pralhad Joshi, who has criticized Rahul Gandhi for criticizing Hindutva organizations abroad, said, Who was communal and who was secular before Rahul Gandhi? Let them realize that.


 It is ridiculous that fake Gandhi is describing the real communal Muslim League parties as secular who are sowing communalism in the country. How can a party that has led to the division of the country and the death of millions of people become secular? This is the greatest insult Rahul Gandhi has done to those who lost their lives in that case. Pralhad Joshi said that there is no end to his politics of appeasement

 Pralhad Joshi has tweeted against Rahul Gandhi's statement, Who is more secular than Hindus? Asked that. Secularism is in Hindu thought itself. But Rahul Gandhi said that Hindu organizations are sowing communalism.

 The people of the country understand who are the real secularists and who are the fanatic vested interests. At the same time, Union Minister Pralhad Joshi has expressed outrage that this appeasement policy of fake Gandhi will not work in the country.

Post a Comment

Previous Post Next Post
Focus News 18

Contact Form