Focus News 18

Ramnagara - ನನಗೆ ರಾಜಕೀಯ ಸಾಕಾಗಿದೆ, ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣ ಮಾಡುತ್ತಿದ್ದೇನೆ: ಕುಮಾರಸ್ವಾಮಿ

ರಾಮನಗರ: ನನಗೆ ರಾಜಕೀಯ ಸಾಕಾಗಿದೆ. ಆದರೆ ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.


ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ಬಾರಿಯೂ ನನಗೆ ಚುನಾವಣೆ ಎದುರಿಸುವ ಆಸಕ್ತಿ ಇರಲಿಲ್ಲ. ಆದರೆ ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣದಲ್ಲಿದ್ದೇನೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಬಗ್ಗೆ ಕೇಳಿದ್ದಕ್ಕೆ, ಇದೆಲ್ಲವೂ ಗಾಳಿ ಸುದ್ದಿ. ಆ ರೀತಿಯ ಯಾವುದೇ ಚರ್ಚೆ ಆಗುತ್ತಿಲ್ಲ. ಈ ವಿಚಾರವನ್ನು ನನ್ನ ಮುಂದೆ ಯಾರೂ ಪ್ರಸ್ತಾಪ ಮಾಡಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ನಾನು ಜಿಲ್ಲಾವಾರು ಸಭೆ ಮಾಡಿದ್ದೇನೆ. ಗೆದ್ದವರು ಹಾಗೂ ಸೋತವರ ಜೊತೆ ಚರ್ಚೆ ಮಾಡಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಉತ್ತರಿಸಿದರು.


ರಾಜಕಾರಣ ಎಂದ ಮೇಲೆ ಈ ರೀತಿಯ ಗಾಳಿ ಸುದ್ದಿಗಳು ಹರಡುತ್ತದೆ. ಕೆಲವು ಊಹಾಪೋಹಗಳೂ ಏಳುತ್ತವೆ. ಸದ್ಯಕ್ಕಂತೂ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ನನ್ನ ಮುಂದೆ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

Ramnagar: I have had enough of politics. But former CM HD Kumaraswamy said that he is doing politics at the insistence of activists.


 Speaking to the media in Channapatnam, he said, "Last time too, I was not interested in contesting the election." But he said that he is in politics because of the insistence of activists.

 As for hearing about an alliance with the BJP in the Lok Sabha elections, all this is a windfall. There is no such discussion. No one has raised this issue before me. I have held a district wise meeting regarding the Lok Sabha elections. I have discussed with winners and losers. He replied that he will take appropriate decision during the election.


 This kind of windy news spreads over politics. Some speculations also arise. He clarified that as of now, no discussions have taken place before me regarding the BJP-JDS alliance.

Post a Comment

Previous Post Next Post
Focus News 18

Contact Form