Focus News 18

Tumakur - ಕಾರ್ಯಕರ್ತರ ಸಂಭ್ರಮ: ಪಟಾಕಿ ಕಿಡಿ ಹಾರಿ ಸಚಿವ ರಾಜಣ್ಣ ಕಣ್ಣಿಗೆ ಗಾಯ

ತುಮಕೂರು: ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅವರ ಕಣ್ಣಿಗೆ ಪಟಾಕಿ ಕಿಡಿ ಹಾರಿ ಗಾಯಗೊಂಡ ಘಟನೆ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎನ್ ರಾಜಣ್ಣ ಅವರು ಇಂದು ಶಕ್ತಿ ಯೋಜನೆ ಗೆ ಚಾಲನೆ ನೀಡಲು ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು. ವಿಷಯ ತಿಳಿದ ಕೆಎನ್ ಆರ್ ಅಭಿಮಾನಿಗಳು ಹಿತೈಷಿಗಳು ಕಾಂಗ್ರೆಸ್ ಕಾರ್ಯಕರ್ತರು ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್ ಬಳಿ ಕಾರನ್ನು ತಡೆದು ಹೂಮಾಲೆ ಹಾಕಿ ಅಭಿನಂದಿಸಿದರು. ಬಳಿಕ ಸಮೀಪದಲ್ಲೇ ಪಟಾಕಿ ಸಿಡಿಸಿದರು.

ಇತ್ತ ಯಾಕೋ ಸಚಿವರು ತಮ್ಮ ಕನ್ನಡಕವನ್ನೊಮ್ಮೆ ತೆಗೆದರು. ಇದೇ ವೇಳೆ ಪಟಾಕಿಯ ಕಿಡಿ ನೇರವಾಗಿ ಬಲಗಣ್ಣಿನತ್ತ ಹಾರಿದೆ. ಕೂಡಲೇ ಸಚಿವರನ್ನು ಎಂ.ಎಂ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ನೇತ್ರ ತಜ್ಞ ಡಾ.ರವಿಕುಮಾರ್ ಅವರಿಂದ ಚಿಕಿತ್ಸೆ ಕೊಡಿಸಲಾಯಿತು, ಬಳಿಕ ಅವರು ಹಾಸನಕ್ಕೆ ತೆರಳಿದರು.


Tumkur: Cooperation Minister KN Rajanna was injured by a firecracker in his eye at Huchchamastigauda circle on Sunday morning.

 KN Rajanna, who is the minister in charge of Hassan district, was going to Hassan from Tumkur via Kunigal today to launch the Shakti Yojana. Knowing about the matter, KNR fans, well-wishers and Congress workers stopped the car near Huchchamastigowda circle in Kunigal town and congratulated him by garlanding him. Later they burst firecrackers nearby.

 At this the Minister took off his spectacles. At the same time, the spark of the firework flew directly into the right eye. The minister was immediately taken to MM Private Hospital and treated by ophthalmologist Dr. Ravikumar, after which he left for Hassan.

Post a Comment

Previous Post Next Post
Focus News 18

Contact Form