Focus News 18

Tumakur - ಕಾಂಗ್ರೆಸ್ ಸರ್ಕಾರ ವಿದ್ಯುತ್​ ಬಿಲ್​ ಹೆಚ್ಚಳ ಮಾಡಿಲ್ಲ: ಸಚಿವ ಡಾ.ಜಿ. ಪರಮೇಶ್ವರ್

ತುಮಕೂರು: ನಮ್ಮ ಸರ್ಕಾರ ಕರೆಂಟ್​ ಬಿಲ್​ ಜಾಸ್ತಿ ಮಾಡಿಲ್ಲ. ಹಿಂದಿನ ಸರ್ಕಾರದಲ್ಲಿಯೇ ವಿದ್ಯುತ್​ ದರ ಏರಿಕೆ ಮಾಡಲಾಗಿತ್ತು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್​ ಹೇಳಿದ್ದಾರೆ.

ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್​ ವಿದ್ಯುತ್​ ಬಿಲ್ ಏರಿಕೆ ಮಾಡಿದೆ ಎಂದು ಕೆಲವರು ಸುಮ್ಮನೆ ಕತೆ ಕಟ್ಟುತ್ತಿದ್ದಾರೆ ಎಂದು ಹೇಳಿದ್ದಾರೆ.

ಕರೆಂಟ್​ ಬಿಲ್​ ಜಾಸ್ತಿ ಬರೋಕೆ ನಮ್ಮ ಸರ್ಕಾರ ಕಾರಣವಲ್ಲ. ನೀವು ಯುನಿಟ್​ ಜಾಸ್ತಿ ಬಳಕೆ ಮಾಡಿದ್ದರೆ ನೀವೇ ಬಿಲ್​ ಕಟ್ಟಬೇಕು . ಹಿಂದಿನ ಸರ್ಕಾರ ವಿದ್ಯುತ್​ ದರ ಏರಿಕೆ ಮಾಡಿದ್ದು ಅದರ ಬಿಲ್​ ಈಗ ಬಂದಿದೆ ಎಂದು ಡಾ.ಜಿ ಪರಮೇಶ್ವರ್​ ಹೇಳಿದರು .

ಗ್ಯಾರಂಟಿ ಕಾರ್ಡ್​ ನಲ್ಲಿದ್ದ ಎಲ್ಲಾ ಯೋಜನೆಗಳನ್ನು ನಾವು ಜಾರಿ ಮಾಡುತ್ತೇವೆ, ಎಲ್ಲಾ ಯೋಜನೆಗಳು ಮುಂದುವರಿಯುತ್ತಿದೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ ಎಂದು ಹೇಳಿದರು

Tumkur: Our government has not increased the current bill. Home Minister Dr. G. Parameshwar said.

 Talking about this issue in Tumkur, he said that some people are just making up stories that the Congress has increased the electricity bill.

 Our government is not responsible for the high current bill. If you have used more units, you have to pay the bill yourself. Dr. G. Parameshwar said that the previous government had increased the electricity rate and now the bill has arrived.

 We implement all the plans in the guarantee card, all the plans are in progress. He said that no one should have any doubts about this

Post a Comment

Previous Post Next Post
Focus News 18

Contact Form