Focus News 18

Gruha Lakshmi: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಯಾರೆಲ್ಲಾ ಅರ್ಹರು? ಇಲ್ಲಿದೆ ಸಂಪೂರ್ಣ ಮಾಹಿತಿ

ಹೀಗಿದೆ 'ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ' ಫಲಾನುಭವಿಗಳ ಅನುಮಾನಗಳಿಗೆ ನೀಡಿರುವಂತ ಸ್ಪಷ್ಟನೆ

ಗೃಹ ಲಕ್ಷ್ಮಿ ಯೋಜನೆ ಎಂದರೇನು?
"ಗೃಹ ಲಕ್ಷ್ಮಿ ಯೋಜನ" ಕರ್ನಾಟಕ ಸರ್ಕಾರದ ಪ್ರಮುಖ ಮಹಿಳಾ ಸಬಲೀಕರಣ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಪಡಿತರ ಕಾರ್ಡ್ ಹೊಂದಿದ ಕುಟುಂಬದ ಯಜಮಾನಿಗೆ ಮಾಸಿಕ ರೂ. 2000/- ಹಣ ವಿತರಣೆ ಮಾಡಲಾಗುತ್ತದೆ.

ಈ ಯೋಜನೆಗೆ ಯಾರು ಅರ್ಹರು?
ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿದ ಮಹಿಳ ಅರ್ಹಳು.

ಈ ಯೋಜನೆಗೆ ನೋಂದಾಯಿಸುವುದು ಹೇಗೇ?
ಅ) ಈ ಯೋಜನೆಯನ್ನು ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್‌, ಬೆಂಗಳೂರು ಒನ್, ಮಹಾಲಕ್ಷ್ಮಿ ಸೈಬರ್ ಮೂಲಕ ಅರ್ಜಿ ಸಲ್ಲಿಸಬಹುದು.
ಬ) ಸ್ಥಳೀಯ ಮಟ್ಟದಲ್ಲಿ ಸರ್ಕಾರದಿಂದ ನೇಮಕವಾದ ಪ್ರಜಾ ಪ್ರತಿನಿಧಿಗಳು ಮನೆಮನೆಗೆ ತರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ.

ಯೋಜನೆಗೆ ನೋಂದಾವಣಿ ಯಾವಾಗ ಆರಂಭವಾಗುತ್ತದೆ?
ಇಲಾಖೆ ನೀಡಿದ ವಾಟ್ಸಾಪ್ ನಂಬರ್'ಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಕಳುಹಿಸಬೇಕು. [Ex : GL ರೇಷನ್ ಕಾರ್ಡ್ ನಂಬರ್ ಅಥವಾ 1902ಗೆ ಕರೆ ಮಾಡಬಹುದು.

ನೋಂದಣಿಗೆ ಕಾಯ್ದಿರಿಸುವ ಸಮಯದ ಮಾಹಿತಿ ಹೇಗೆ ದೊರಕಲಿದೆ?
1902 ಸಂಖ್ಯೆಗೆ ಕರೆ ಮಾಡಿದಲ್ಲಿ ಅಥವಾ 8147-500-500 ಸಂಖ್ಯೆಗೆ ಎಸ್.ಎಂ.ಎಸ್. ಮೂಲಕ GL ರೇಷನ್ ಕಾರ್ಡ್ ನಂಬರ್ ಕಳುಹಿಸಿದಲ್ಲಿ ಸಂದೇಶದ ಮೂಲಕ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿ ದೊರಕಲಿದೆ.

ನಿಗದಿತ ಸಮಯಕ್ಕೆ ನೋಂದಾಯಿಸಲು ಸಾಧ್ಯವಾಗದಿದ್ದಲ್ಲಿ ಅನಂತರ ಅವಕಾಶ ಇದೆಯೇ?
ನಿಗದಿತ ಸಮಯಕ್ಕೆ ಭೇಟಿ ಸಾಧ್ಯವಾಗದಿದ್ದಲ್ಲಿ ಅದೇ ಸ್ಥಳಕ್ಕೆ ಮುಂದಿನ ಯಾವುದೇ ನಿಗದಿತ ದಿನಗಳಲ್ಲಿ, ಕಚೇರಿಯ ಸಮಯದಲ್ಲಿ ತೆರಳಿ ನೋಂದಾಯಿಸಿಕೊಳ್ಳಬಹುದು.

ಯೋಜನೆಗೆ ಸೇವಾ ಕೇಂದ್ರಗಳಿಗೆ ಹೋಗದೇ ನೋಂದಾಯಿಸ ಬಹುದೇ?
ಹೌದು, ಸ್ಥಳೀಯ ಮಟ್ಟದಲ್ಲಿ ಸರ್ಕಾರದಿಂದ ನೇಮಕಗೊಂಡ ಪುಜಾಪ್ರತಿನಿಧಿಗಳು ಮನಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲಿದ್ದಾರೆ.

ಈ ಯೋಜನೆ ನೋಂದಾಯಿಸಲು ಸಲ್ಲಿಸಬೇಕಾಗಿರುವ ದಾಖಲೆಗಳು ಯಾವುವು?
ರೇಷನ್ ಕಾರ್ಡ್ ಪ್ರತಿ, ಯಜಮಾನಿ ಮತ್ತು ಆಕೆಯ ಪತಿಯ ಆಧಾರ್ ಕಾರ್ಡ್ ಪ್ರತಿ ಮತ್ತು ಯೋಜನೆಯ ನಗದು ಸೌಲಭ್ಯ ಪಡೆಯಲು ಇಚ್ಚಿಸುವ ಬ್ಯಾಂಕ್ ಖಾತೆಯ ಪಾಸ್ ಬುಕ್ ಪ್ರತಿ ಅಗತ್ಯವಿದೆ.

ನೋಂದಾಯಿಸಲು ಶುಲ್ಕ ಪಾವತಿಸಬೇಕೆ?
ಈ ಯೋಜನೆಯ ನೋಂದಣಿ ಸಂಪೂರ್ಣ ಉಚಿತ. (ಯಾವುದೇ ಕಾರಣಕ್ಕೂ ಯಾರಿಗೂ ಹಣ ನೀಡಬೇಡಿ)

ಈ ಯೋಜನೆಗೆ ನೋಂದಾಯಿಸಲು ಕೊನೆಯ ದಿನಾಂಕ ಇದೆಯೇ?
ಈ ಯೋಜನೆಗೆ ಯಾವುದೇ ಕೊನೆಯ ದಿನಾಂಕದ ಮಿತಿಯಿಲ್ಲ, ಯಾವುದೇ ಸಮಯದಲ್ಲಿ ಬೇಕಿದ್ದರೂ ನೋಂದಾಯಿಸಬಹುದು.

ಈ ಯೋಜನೆಯನ್ನು ಯಾವಾಗಿನಿಂದ ಜಾರಿಗೆ ತರಲಾಗುತ್ತದೆ?
ಆಗಸ್ಟ್ 15, 2023 ರ ನಂತರ ಫಲಾನುಭವಿಗಳು ಮೊದಲ ಹಣಕಾಸು ನೆರವು ರೂ. 2000/- ಪಡೆಯಲಿದ್ದಾರೆ.

ತೆರಿಗೆ ಪಾವತಿಸುತ್ತಿದ್ದರೆ ಯೋಜನೆಗೆ ಅರ್ಹರಾ?
ಇಲ್ಲ. ಕುಟುಂಬದ ಯಜಮಾನಿ ಅಥವಾ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಆ ಕುಟುಂಬದ ಯಜಮಾನಿಗೆ ಗೃಹ ಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ.

ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವವರು ಅರ್ಹರಾ?
ಇಲ್ಲ. ಕುಟುಂಬದ ಯಜಮಾನಿ ಅಥವಾ ಪತಿ ಜಿಎಸ್'ಟಿ ರಿಟರ್ನ್ ಸಲ್ಲಿಸುವವರಾಗಿದ್ದರೆ, ಈ ಯೋಜನೆಗೆ ಅರ್ಹರಾಗುವುದಿಲ್ಲ.

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವವರು ಅರ್ಹರೇ?
ಇಲ್ಲ. ಸದ್ಯದ ಮಾರ್ಗಸೂಚಿ ಪುಕಾರ ಅರ್ಜಿ ಸಲ್ಲಿಸಿ ಕಾಯುತ್ತಿರುವವರು ಅರ್ಹರಲ್ಲ.

ನೋಂದಾಯಿಸಿದ ನಂತರ ನಾನು ಯಾವುದೇ ಸ್ವೀಕೃತಿಯನ್ನು ಪಡೆಯಬಹುದೇ?
ಹೌದು, ನೋಂದಣಿ ಸಮಯದಲ್ಲಿ ಮೆಸೇಜ್/ಎಸ್.ಎಂ.ಎಸ್ ಅನ್ನು ಗ್ರಾಹಕರಿಗೆ ನೀಡಲಾಗುತ್ತದೆ.

ಫಲಾನುಭವಿಗಳಿಗೆ ಹಣ ಹೇಗೆ ತಲುಪುತ್ತದೆ?
ಅರ್ಹ ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಅಥವಾ ಆರ್.ಟಿ.ಜಿ.ಎಸ್ (RTGS) ಮೂಲಕ ಮಾಸಿಕ ರೂ. 2000/- ವಿತರಿಸಲಾಗುತ್ತದೆ.

ಯಾರನ್ನು ಮನೆಯ ಯಜಮಾನಿ ಎಂದು ಪರಿಗಣಿಸಲಾಗುತ್ತದೆ?
ರೇಷನ್ ಕಾರ್ಡ್'ನಲ್ಲಿ ನಮೂದಿಸಿರುವ ಮನಯ ಯಜಮಾನಿಯನ್ನೇ 'ಗೃಹಲಕ್ಷ್ಮಿ' ಯೋಜನೆಯ ಫಲಾನುಭವಿ ಎಂದು ಪರಿಗಣಿಸಲಾಗುತ್ತದೆ.

ಕುಟುಂಬದ ಯಜಮಾನಿ ಬೇರೆ ಸದಸ್ಯರ ಬ್ಯಾಂಕ್‌ ಖಾತೆ ನೀಡಬಹುದಾ?
ಇಲ್ಲ. ಕುಟುಂಬದ ಯಜಮಾನಿ ತಮ್ಮದೇ ಬ್ಯಾಂಕ್ ಖಾತೆಯನ್ನು ನೀಡಬೇಕು.

ಪಡಿತರ ಚೀಟಿಯಲ್ಲಿ ಅತ್ತೆ ಯಾಜಮಾನಿಯಾಗಿದ್ದು, ಸದಸ್ಯರ ಪಟ್ಟಿಯಲ್ಲಿ ಸೊಸೆಯ ಹೆಸರಿದ್ದು, ಸೊಸೆಯನ್ನೇ ಫಲಾನುಭವಿಯನ್ನಾಗಿಸುವ ಸೌಲಭ್ಯವಿದೆಯೇ?
ಇಲ್ಲ, ಪಡಿತರ ಚೀಟಿಯಲ್ಲಿಯ ಯಜಮಾನಿಯೇ ಈ ಯೋಜನೆಯ ಫಲಾನುಭವಿಯಾಗಿರುತ್ತಾರೆ.

ಕುಟುಂಬದ ಮುಖ್ಯಸ್ಮರಿಗಾಗಿ ನಾವು ಈಗ ರೇಷನ್ ಕಾರ್ಡ್ ನಲ್ಲಿ ಬದಲಾವಣೆಗಳನ್ನು ಮಾಡಬಹುದೇ. (ಉದಾ: ಪತಿ ಕುಟುಂಬದ ಮುಖ್ಯಸ್ಥ)
ಬದಲಾವಣೆ ಸಾಧ್ಯ. ಪಡಿತರ ಚೀಟಿಯಲ್ಲಿ ಈಗಾಗಲೇ ನಮೂದಿಸಿರುವ ಕುಟುಂಬದ ಯಜಮಾನಿ ಮಹಿಳೆಗೆ ಸೌಲಭ್ಯ ನೀಡಲಾಗುವುದು.

ಮಂಗಳಮುಖಿಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದೇ ?
ಹೌದು, ಮಂಗಳಮುಖಿಯರು ಪಡಿತರ ಚೀಟಿಯಲ್ಲಿ ಮನೆ ಯಜಮಾನಿ ಘೋಷಿತವಾಗಿದ್ದರೆ ನೊಂದಾಯಿಸಿಕೊಳ್ಳಬಹುದು.
ಎಂದು

ಗಂಡ ಮತ್ತು ಹೆಂಡತಿ ಜಂಟಿ ಖಾತೆಯನ್ನು ಹೊಂದಿದ್ದರೆ, ಜಂಟಿ ಖಾತೆ ವಿವರಗಳನ್ನು ನೊಂದಾಯಿಸಲು ಒದಗಿಸಬಹುದೇ?
ಇಲ್ಲ, ಯೋಜನೆಯಡಿ ನೊಂದಾಯಿಸಿಕೊಳ್ಳುವವರು ಹೊಸ ಬ್ಯಾಂಕ್ ಖಾತೆಯನ್ನು ತೆರೆದು ಪಾಸ್ ಪುಸ್ತಕದ ಪ್ರತಿಯನ್ನು ಒದಗಿಸಬೇಕು.

ತಾಯಿ ಕುಟುಂಬದ ಮುಖ್ಯಸ್ಥೆಯಾಗಿದ್ದರೆ ಮತ್ತು ಇತ್ತೀಚೆಗೆ ಮಹಿಳೆ ನಿಧನರಾದರೆ, ಈ ಸನ್ನಿವೇಶದಲ್ಲಿ ಏನು ಮಾಡಬಹುದು?
ಪಡಿತರ ಚೀಟಿಯಲ್ಲಿ ಅಗತ್ಯ ತಿದ್ದುಪಡಿಯಾದ ನಂತರ ನೊಂದಾಯಿಸಬಹುದು.

ಮಗ/ಮಗಳು ತೆರಿಗೆ ಪಾವತಿದಾರನಾಗಿದ್ದರೆ ಅಥವಾ ಐಟಿ ರಿಟರ್ನ್ಸ್ ಸಲ್ಲಿಸಿದ್ದರೆ, ತಾಯಿ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗುತ್ತಾರೆಯೇ?
ಹೌದು ಅರ್ಹರಾಗುತ್ತಾರೆ.

ನಾನು ರಾಷ್ಟ್ರೀಕೃತ / ಷೆಡ್ಯೂಲ್ಡ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದೇನೆ, ನಾನು ಗೃಹಲಕ್ಷ್ಮಿ ಯೋಜನೆಗೆ ಖಾತೆಯನ್ನು ಬಳಸಬಹುದೇ?
ಹೌದು, ಬಳಸಬಹುದು.

ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ ಏನು ಮಾಡಲಾಗುವುದು?
ಈಗಾಗಲೇ ಪಾವತಿಸಲಾಗಿರುವ ಹಣವನ್ನು ಫಲಾನುಭವಿಗಳಿಂದ ಮಾಡಲಾಗುವುದು ಮತ್ತು ಅಂತಹವರ ವಿರುದ್ಧ ಕೈಗೊಳ್ಳಲಾಗುವುದು.
ಕಾನೂನು ರೀತಿ ಸೂಕ್ತ ಕ್ರಮ

ಕುಟುಂಬದ ಯಜಮಾನಿಯು ಮರಣ ಹೊಂದಿದ್ದಲ್ಲಿ ಮುಂದಿನ ಕ್ರಮವೇನು?
ಕುಟುಂಬದ ಯಜಮಾನಿಯು ಮರಣ ಹೊಂದಿದ್ದಲ್ಲಿ ಯೋಜನೆಯ ಸೌಲಭ್ಯ ಸ್ಥಗಿತಗೊಳಿಸಲಾಗುವುದು.

ಆಧಾರ್ ಮತ್ತು ಪಡಿತರ ಚೀಟಿಯಲ್ಲಿ ಹೆಸರು/ವಿಳಾಸ ಹೊಂದಿಕೆಯಾಗದಿದ್ದರೆ ಅಂತಹವರನ್ನು ನೊಂದಣಿ ಮಾಡಿಕೊಳ್ಳಲಾಗುತ್ತದೆಯೇ? ನೊಂದಣಿ ಪುಕ್ರಿಯೆಗೊಳಿಸಲಾಗುತ್ತದೆಯೇ?
ಈಗಾಗಲೇ ಆಧಾರ್ ಮತ್ತು ಪಡಿತರ ಚೀಟಿ ಜೋಡಣೆಯಾಗಿರುವುದರಿಂದ ಈ ಪ್ರಶ್ನೆ ಉದ್ಭವಿಸುವುದಿಲ್ಲ.

ಯೋಜನೆಯಡಿ ನೊಂದಾಯಿಸಿಕೊಳ್ಳಲು ಗಂಡನ ವಿವರಗಳು ಕಡ್ಡಾಯವಾಗಿದೆ. ವಿಚ್ಛೇದನದ ಪ್ರಕರಣವು ಬಾಕಿ ಉಳಿದಿದ್ದರೆ ಅಥವಾ ನ್ಯಾಯಾಲಯದಲ್ಲಿ ಪ್ರಕ್ರಿಯೆಯಲ್ಲಿದ್ದರೆ ಏನು ಮಾಡಬೇಕು?
ಕಾನೂನು ರೀತಿ ವಿಚ್ಚೇದನ ಆಗಿದ್ದಲ್ಲಿ ಗಂಡನ ವಿವರಗಳನ್ನು ಸಲ್ಲಿಸುವ ಅಗತ್ಯವಿಲ್ಲ.

ನಾಗರಿಕರು ಆಸ್ತಿ ತೆರಿಗೆಯನ್ನು ಪಾವತಿಸುತ್ತಿದ್ದರೆ ಅವರು ನೊಂದಾಯಿಸಿಕೊಳ್ಳಲು ಅರ್ಹರಾಗುತ್ತಾರೆಯೇ?
ಹೌದು, ಅರ್ಹರಿರುತ್ತಾರೆ.

ನಾಗರಿಕರು ಅಂಗವಿಕಲರಾಗಿದ್ದರೆ ಮತ್ತು ಕೇಂದ್ರಗಳಿಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ ಮತ್ತು ನಾಗರಿಕನು ಆಶಿಕ್ಷಿತರಾಗಿದ್ದರೆ ಕುಟುಂಬದ ಸದಸ್ಯರು Offline ನಲ್ಲಿ ನೊಂದಾಯಿಸಬಹುದೇ?
ಸ್ಥಳೀಯ ಮಟ್ಟದಲ್ಲಿ ಸರ್ಕಾರದಿಂದ ನೇಮಕಗೊಂಡ, ಮನೆಮನೆಗೆ ತೆರಳಿ ಉಚಿತವಾಗಿ ನೊಂದಣಿ ಮಾಡಿಕೊಳ್ಳುವ ಪುಜಾಪತಿನಿಧಿಗಳ ಮೂಲಕ ನೊಂದಾಯಿಸಿಕೊಳ್ಳಬಹುದು.

ನಾಗರಿಕರು ಸರ್ಕಾರಿ ವಲಯದಲ್ಲಿ ಕೆಲಸ ಮಾಡಿದ್ದರೆ, ಈಗ ಅವರು ನಿವೃತ್ತರಾಗಿದ್ದರೆ ಯೋಜನೆಗೆ ನೊಂದಾಯಿಸಿಕೊಳ್ಳಲು ಮತ್ತು ಪಿಂಚಣಿ ಪಡೆಯುತ್ತಿರುವವರು ಅರ್ಹರಾಗುತ್ತಾರೆಯೇ?
ಅವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸದಿದ್ದರೆ ಅರ್ಹರಾಗುತ್ತಾರೆ. ನಾಗರಿಕರು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಿದ್ದರೆ, ಈಗ ಅವರು ನಿವೃತ್ತರಾಗಿದ್ದು, ಯೋಜನೆಗೆ ನೊಂದಾಯಿಸಿಕೊಳ್ಳಲು ಪಿಂಚಣಿ ಪಡೆಯುತ್ತಿರುವವರು ಅರ್ಹರಾಗುತ್ತಾರೆಯೇ ಅವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸದಿದ್ದರೆ ಅರ್ಹರಾಗುತ್ತಾರೆ.

ಕುಟುಂಬದ ಮುಖ್ಯಸ್ಥರಿಗಾಗಿ ನಾವು ಈಗ ರೇಷನ್ ಕಾರ್ಡ್ ನಲ್ಲಿ ಬದಲಾವಣೆಗಳನ್ನು ಮಾಡಬಹುದೇ. (ಉದಾ: ಪತಿ ಕುಟುಂಬದ ಮುಖ್ಯಸ್ಥ)
ನಿಯಮಾನುಸಾರ ಸದರಿ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಮಹಿಳೆ ಎಂದು ಬದಲಾದಲ್ಲಿ ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ವಿಚಾರಿಸಬಹುದು.

Post a Comment

Previous Post Next Post
Focus News 18

Contact Form