Focus News 18

Mangaluru | ಮೊಬೈಲ್ ನೋಡಿಕೊಂಡು ಸ್ಟೇರಿಂಗ್ ಕಂಟ್ರೋಲ್: ವೀಡಿಯೋ ವೈರಲ್

ಉಳ್ಳಾಲ: ಸ್ಟೇಟ್ ಬ್ಯಾಂಕ್ ನಿಂದ ತಲಪಾಡಿ ನಡುವೆ ಚಲಿಸುವ ಸಿಟಿ ಬಸ್ಸಿನ ಚಾಲಕ ಒಂದು ಕೈಲಿ ಮೊಬೈಲ್, ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ತಿರುಗಿಸುತ್ತ ಚಾಲನೆ ಮಾಡಿದ ವೀಡಿಯೋ ವೈರಲ್ ಆಗಿದೆ.

ಚಾಲಕನ ನಿರ್ಲಕ್ಷ್ಯವನ್ನು ಬಸ್ ಪ್ರಯಾಣಿಕರೋರ್ವರು ವೀಡಿಯೋ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.


42 ನಂಬರಿನ ಸೈಂಟ್ ಆಂಟನಿ ಬಸ್ ಚಾಲಕ ನಿರ್ಲಕ್ಷ್ಯ ರೀತಿಯಲ್ಲಿ ಬಸ್ ಚಲಾಯಿಸಿದ್ದಾನೆ. ನೇತ್ರಾವತಿ ಸೇತುವೆಯಿಂದ ಮೊಬೈಲ್ ನೋಡಲು ಆರಂಭಿಸಿದ ಚಾಲಕ ತೊಕ್ಕೊಟ್ಟು ವರೆಗೂ, ಒಂದು ಕೈಯಲ್ಲಿ ಸ್ಟೇರಿಂಗ್, ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಬೇಜವಾಬ್ದಾರಿಯುತ ವಾಗಿ ಬಸ್ಸನ್ನು ಚಲಾಯಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಬಸ್ ನಲ್ಲಿ ಅಧಿಕ ಪ್ರಯಾಣಿಕರೂ ಇದ್ದರು ಎಂಬುದನ್ನು ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

117 (ಐಎಂವಿ) ಮೋಟಾರ್ ಆಕ್ಟ್ ನಡಿ ಸಿಟಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಪ್ರಸ್ತುತ ಕಾಯಿದೆಯಡಿ ಲೈಸನ್ಸ್ ರದ್ದುಗೊಳಿಸುವುದು ಹಾಗೂ ದಂಡ ವಿಧಿಸಲಾಗುವುದು. ಸಾರ್ವಜನಿಕವಾಗಿ ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಇಲಾಖೆ ಪ್ರಕರಣ ದಾಖಲಿಸಲಾಗುವುದು ಎಂದು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ರಮೇಶ್ ಹಾನಾಪುರ ತಿಳಿಸಿದ್ದಾರೆ.


Ullala: A video of a city bus driver plying between State Bank and Talapadi with a mobile phone in one hand and the steering wheel in the other has gone viral.

 A video of the driver's negligence was recorded by a bus passenger and shared on social media.


 The driver of St. Anthony bus number 42 drove the bus negligently. The video captures the irresponsible driving of the bus by holding the steering wheel in one hand and the mobile in the other till the driver started looking at the mobile phone from Netravati Bridge.
 The passenger shared on social media that there were more passengers in the bus.

 A case will be registered against the city bus driver under Section 117 (IMV) Motor Act. Under the current Act, the license will be revoked and fines will be imposed. Inspector Ramesh Hanapura of Mangalore South Traffic Police Station said that a case will be registered voluntarily by the department after the video went viral.


Post a Comment

Previous Post Next Post
Focus News 18

Contact Form