Focus News 18

Badami - ಲೋಕಾಯುಕ್ತ ಬಲೆಗೆ ಬಿಇಒ ಕಚೇರಿಯ ಅಧೀಕ್ಷಕ ವೆಂಕಟೇಶ ಇನಾಮದಾರ

ಲೋಕಾಯುಕ್ತ ಬಲೆಗೆ ಬಿಇಒ ಕಚೇರಿಯ ಅಧೀಕ್ಷಕ ವೆಂಕಟೇಶ ಇನಾಮದಾರ 
-----------------------------
ಬಾದಾಮಿ: ಶಿಕ್ಷಕರ ಹೆಚ್ಚುವರಿ ವೇತನ ಪಾವತಿಗೆ ಹಣ ಬೇಡಿಕೆ ಇಟ್ಟು ಹಣ ಪಡೆಯುತ್ತಿರುವಾಗ ಬಿಇಒ ಕಚೇರಿಯ ಅಧೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳವಾರ ಮಧ್ಯಾಹ್ನ ಪಟ್ಟಣದ ಬಿಇಒ ಕಚೇರಿಯಲ್ಲಿ ನಡೆದಿದೆ.  

ಲೆಕ್ಕ ಅಧೀಕ್ಷಕ ವೆಂಕಟೇಶ ಇನಾಮದಾರ ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಶಿಕ್ಷಕರಿಂದ ನಗದು ಹಣ ಪಡೆಯುವ ಸಂದರ್ಭದಲ್ಲಿ ನೇರವಾಗಿ ಸಿಕ್ಕಿಬಿದ್ದಿರುತ್ತಾನೆ. ಗುಳೇದಗುಡ್ಡ ನಗರದ ವೆಂಕಟೇಶ್ವರ ಪ್ರೌಢಶಾಲೆಯ ಶಿಕ್ಷಕರ ವೇತನವನ್ನು ಶೀಘ್ರ ಬಿಡುಗಡೆ ಮಾಡಬೇಕೆಂದು ಹೇಳಿದ್ದರು ಆಗ ವೆಂಕಟೇಶ್ ಇನಾಮದಾರ ಈತನು 18 ಸಾವಿರ ರೂ ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದು ಅದರಲ್ಲಿ 10,000 ಮೊದಲು ನೀಡಿದ್ದು, ಪಿರಿಯಾದಿದಾರ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಸತ್ಯಪ್ಪ ಸಂಗಪ್ಪ ಕಾಮ ಇವರು ಮಂಗಳವಾರ ಮಧ್ಯಾಹ್ನ 1.30 ಗಂಟೆಗೆ 8 ಸಾವಿರ ರೂಪಾಯಿ ಲಂಚ ನೀಡುವಾಗ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ಮಾಡಿದ್ದು ಇರುತ್ತದೆ ಲೋಕಾಯುಕ್ತ ಠಾಣೆಯಲ್ಲಿ ಪ್ರಕಾರ ಪ್ರಕರಣ ದಾಖಲು ಮಾಡಿ ದಸ್ತಗಿರ ಮಾಡಿರುವುದಾಗಿ ತಿಳಿದು ಬಂದಿದೆ ಲಂಚ ನೀಡುವ ಸಂದರ್ಭದಲ್ಲಿ ಲೋಕಾಯುಕ್ತ ಪಿ.ಎಸ್.ಐ. ಎಚ್.ಎನ್.ಬಿದರಿ ಹಾಗೂ ಸಿಬ್ಬಂದಿ ವರ್ಗದವರು ದಾಳಿ ಸಮಯದಲ್ಲಿ ಹಾಜರಿದ್ದರು.

Badami: The incident took place at the BEO office in the town on Tuesday afternoon when the superintendent of the BEO office fell into the trap of Lokayukta while he was demanding money for payment of teachers' extra salary.

 Accounts Superintendent Venkatesh Inamdara was directly caught in the act of accepting cash from teachers during the Lokayukta raid. When Venkatesh Inamdar demanded to pay a bribe of Rs 18,000, out of which Rs 10,000 had been given first, Satyappa Sangappa Kama of Chittargi village of Piyadadara Hunagunda taluk was attacked by the Lokayukta officials while offering a bribe of Rs 8,000. According to the police station, it has been learned that the case has been registered and seized while the Lokayukta P.S.I. H.N. Bidari and staff members were present during the attack.

Post a Comment

Previous Post Next Post
Focus News 18

Contact Form