Focus News 18

Bailahongal - ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ 77 ನೇ ಸ್ವಾತಂತ್ರೋತ್ಸವ ಅದ್ದೂರಿ ಆಚರಣೆ

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಬೈಲವಾಡ ಗ್ರಾಮದ ಸರಕಾರಿ ಶಾಲೆಯಲ್ಲಿ 15-08-2023 ರಂದು 77 ನೇ ಸ್ವಾತಂತ್ರ್ಯೋತ್ಸವದ ನಿಮಿತ್ಯ ಎಸ್ ಡಿ ಎಂ ಸಿ ಸಿಬ್ಬಂದಿಗಳು ಮತ್ತು ಶಿಕ್ಷಕ ವೃಂದದವರು ಕೂಡಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಶಾಲೆಯ ಮುಖ್ಯೋಪಾಧ್ಯಾಯರಾದ ಪಕ್ಕೀರ ಸ್ವಾಮಿ ಮಠ, ಸಹ ಶಿಕ್ಷಕರಾದ ಬೆಳವಲ, ಬೂದಿಹಾಳ, ಗಣಾಚಾರಿ, ಗುರುಗಳು ಮತ್ತು ಶ್ರೀಮತಿ ಮೆಳವಂಕಿ, ಬಾವಿ, ಸೌದಿ, ಶಿಕ್ಷಕಿಯರು ಸೇರಿ ಚಿತ್ರಕಲೆಯಲ್ಲಿ, ಆಟಗಳಲ್ಲಿ, ಪ್ರಬಂಧ ಸ್ಪರ್ಧೆಗಳಲ್ಲಿ, ಭಾಗವಹಿಸಿ, ಜಯಗಳಿಸಿದ ಮಕ್ಕಳಿಗೆ ಬಹುಮಾನಗಳನ್ನು ನೀಡಿದರು
 ಈ ಸಮಯದಲ್ಲಿ ಶಿಕ್ಷಕ ವೃತ್ತಿ ಆರಂಭವಾದಾಗಿನಿಂದ ಸುಧೀರ್ಘ 26 ವರ್ಷಗಳ ಸೇವೆ ಸಲ್ಲಿಸಿ ಬೈಲಹೊಂಗಲ ತಾಲೂಕು ಅಮಟೂರಿನ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡ ಶ್ರೀ ಸೋಮಪ್ಪ ಡಿ ಲಮಾಣಿ ಗುರುಗಳನ್ನು ಬೀಳ್ಕೊಡುವ ಸಮಾರಂಭವು ಕೂಡ ನಡೆಯಿತು. ಆಗ ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರು ಭಾವುಕರಾಗಿ ಶ್ರೀ ಲಮಾಣಿ ಗುರುಗಳನ್ನು ಬಿಳ್ಕೊಟ್ಟರು.
 ದಾನಿಗಳ ನೆರವಿನಿಂದ ನಲಿ ಕಲಿ ಕೊಠಡಿಯನ್ನು ವಿನ್ಯಾಸಗೊಳಿಸಿ ಮಕ್ಕಳಿಗೆ ಕುರ್ಚಿಗಳನ್ನು ಮತ್ತು ಮೇಜುಗಳನ್ನು ಹಾಗೂ ಇನ್ನೂ ಉಳಿದ ಉಪಕರಣಗಳನ್ನು ವ್ಯವಸ್ಥೆ ಮಾಡುವಲ್ಲಿ ಎಸ್ ಡಿ ಎಂ ಸಿ ಸಿಬ್ಬಂದಿಗಳು ಉತ್ಸುಕನಾಗಿದ್ದರು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಶಿವಾನಂದ ಬ ಸಂಪಗಾವ್ ಉಪಾಧ್ಯಕ್ಷರಾದ ಶ್ರೀಮತಿ ನಾಗವೇಣಿ ಭೋಳಗೌಡರ್ ವಿನ್ಯಾಸಗೊಂಡ ನಲಿಕಲಿ ಕೊಠಡಿಯನ್ನು ಉದ್ಘಾಟಿಸಿದರು.
ಈ ಸಮಯದಲ್ಲಿ ಬೈಲಹೊಂಗಲ ತಾಲೂಕು ಫೋಕಸ್ ನಿವ್ಸ್ 18 ಚಾನಲ್ T V ವರದಿಗಾರರಾದ ಶ್ರೀ ಮಹಾಂತೇಶ್ ಎಸ್ ಮುದಕನಗೌಡರ ಅವರನ್ನು ಸತ್ಕರಿಸಲಾಯಿತು.
 ಆಗ ಮುಖ್ಯ ಶಿಕ್ಷಕರು ಮಾತನಾಡಿ ನಮ್ಮ ಶಾಲೆಯ ಸೇವೆ ಮಾಡುತ್ತಿರುವ ಈ ಫೋಕಸ್ ಟಿವಿ ನ್ಯೂಸ್ ಚಾನೆಲ್ ಕರ್ನಾಟಕದಲ್ಲಿ ಪ್ರಸಿದ್ಧ ಪಡೆಯಲಿ ಎಂದು ಹಾರೈಸಿದರು.
 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದಂತ ಶ್ರೀ ಬಸವರಾಜ್ ಬ ಬೋಳಗೌಡರ ನಿರೂಪಿಸಿದರು ಸಾಮಾಜಿಕ ಕಾರ್ಯಕರ್ತರಾದ ಶ್ರೀ ಮಂಜುನಾಥ ಮರಬದ ಅವರು ವಂದಿಸಿದರು
ಕೊನೆಯದಾಗಿ ನಾಗನೂರಿನ ನಿವೃತ್ತ ಶ್ರೀ ಚರಂತಿಮಠ ಗುರುಗಳು ಶಿಕ್ಷಣದ ಮಹತ್ವ ಕುರಿತು ವಿವರಿಸಿದರು

ವರದಿ : ಮಹಾಂತೇಶ ಎಸ್ ಮುದಕನಗೌಡರ ಬೈಲಹೊಂಗಲ

On 15-08-2023 in government school of Bailawada village, Bailahongala taluk, Belagavi district, on the occasion of 77th Independence Day, many programs were organized by SDMC staff and teaching staff. , Saudi, teachers gave prizes to children who participated and won in painting, games, essay competitions.
  During this time, a farewell ceremony was also held for Mr. Somappa D Lamani Guru who was transferred to Government School of Bailahongala Taluk Amatur after serving for 26 years since the beginning of his teaching career. Then the students and fellow teachers became emotional and praised Sri Lamani Guru.
SDMC staff were excited to design the Nali Kali room with the help of donors and arrange chairs and tables for the children and other equipment.

Post a Comment

Previous Post Next Post
Focus News 18

Contact Form