Focus News 18

Bailahongal - ಬೇಲಹೊಂಗಲ ಜಿಲ್ಲೆ ರಚನೆಗೆ ಒತ್ತಾಯಿಸಿ ಪಟ್ಟಣದಲ್ಲಿ ಮುಖ್ಯರಸ್ತೆ ಬಂದ್ ಮಾಡಿ ಪ್ರತಿಭಟನೆ

ಬೈಲಹೊಂಗಲ ಜಿಲ್ಹಾ ರಚನೆ ಮತ್ತೆ ಮಂಚೂನೆಗೆ!!
 ಬೇಲಹೊಂಗಲ ಜಿಲ್ಲೆ ರಚನೆಗೆ ಒತ್ತಾಯಿಸಿ ಪಟ್ಟಣದಲ್ಲಿ ಹೋರಾಟ ಸಮಿತಿ ಮುಖಂಡರು ಶುಕ್ರವಾರ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ 
 ಪ್ರಮುಖರಸ್ತೆ ಬಂದ್ ಆಗಿದ್ದರಿಂದ ಇಂಚಲ್ ಕ್ರಾಸ್ ದಿಂದ ಬಸ್ ನಿಲ್ದಾಣದವರೆಗೆ ಮತ್ತು ಎಪಿಎಂಸಿ ವರೆಗೆ ನಾನಾ ತರಹದ ವಾಹನಗಳು ಸಾಲುಗಟ್ಟಿ ನಿಂತಿದ್ದವು ಪ್ರತಿಭಟನಾಕಾರರು ರಾಜ್ಯ ಸರ್ಕಾರದ ನಡೆಗೆ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಗೆ ಧಿಕ್ಕಾರ ಕೂಗಿದರು ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಟ್ಟರು
 ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ್ ಬೋಳನ್ನವರ್ ಮಾತನಾಡಿ ರಾಜಕೀಯ ನಾಯಕರು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ವಿನಾಕಾರಣ ಅಖಂಡ ಬೆಳಗಾವಿ ಜಿಲ್ಲೆ ವಿಭಜನೆಯ ಕಿಚ್ಚುಹಚ್ಚಿ ಜನರ ನಿದ್ದೆಗೆಡಿಸುತ್ತಿದ್ದಾರೆ ಎಂದರು
 ಜಿಲ್ಲೆ ವಿಭಜನೆ ಆಗಬೇಕಾದರೆ ಬ್ರಿಟಿಷರ ಕಾಲದಿಂದಲೂ ವಿಭಾಗ ಅಧಿಕಾರಿ ಕಚೇರಿ ನಾಡಕಚೇರಿ ಮುಂತಾದ ಕಚೇರಿಗಳನ್ನು ಹೊಂದಿರುವ ಬೃಹತ ನಗರ ಈ ನಮ್ಮ ಬೈಲಹೊಂಗಲ ಜಿಲ್ಲೆ ಆಗಲೇಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು
 ಮುಖಂಡರಾದ ರುದ್ರಪ್ಪ ಹೊಸಮನಿ, ಮಹಾಂತೇಶ್ ತುರಮರಿ, ರಾಜು ಜನ್ಮಟ್ಟಿ, ಮಾತನಾಡಿದರು. ಪೂರ್ವ ಕಾಲದಿಂದಲೂ ಇತಿಹಾಸ ಹೊಂದಿರುವ ಪ್ರಮುಖ ತಾಲೂಕಗಳಾದ ಕಿತ್ತೂರು, ಸೌದತ್ತಿ, ರಾಮದುರ್ಗ, ಯರಗಟ್ಟಿ, ಈ ತಾಲೂಕುಗಳಿಗೆ ಸ್ವಾತಂತ್ರ್ಯ ಪೂರ್ವದಿಂದಲೂ ವಿಭಗಾಧಿಕಾರಿ ಕಚೇರಿ ಹೊಂದಿದ ನಾಡು ಈ ಬೈಲಹೊಂಗಲ ಎಂದರು. ಮೂರು ಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ಮಾಂತೇಶ್ ಮತ್ತಿಕೊಪ್ಪ ಗಣಾಚಾರಿ ಶಿಕ್ಷಣ ಸಂಸ್ಥೆಯ ಬಿ ಬಿ ಗಣಚಾರಿ, ಮುಂತಾದವರು ಉಪಸ್ಥಿತರಿದ್ದರು, ಶ್ರೀಶೈಲ್ ಶರಣಪ್ಪನವರ್ ಚಂದ್ರಶೇಖರ ಕೊಪ್ಪದ ಬಾಬುಸಾಬ್ ಸುತಗಟ್ಟಿ, ವಂದನಾರ್ಪಣೆ ಮಾಡಿದರು

ವರದಿ :ಮಹಾಂತೇಶ್ ಎಸ್ ಮುದಕನಗೌಡರ ಬೈಲಹೊಂಗಲ

Formation of Bailahongala District is back to Manchoone!!
  The leaders of the struggle committee in the town have blocked the road and staged a protest demanding the formation of Belahongala district
  Various vehicles were lined up from Inchal Cross to the bus stand and APMC as the main road was blocked. Protesters shouted defiance at the state government's move and the district in-charge minister's statement. The police scrambled to bring the situation under control.
  District Struggle Committee President Shivranjan Bolannavar said that the political leaders are working to divert the people for their own selfish interests and for no reason they are lulling the people to sleep with the slogan of division of Belagavi district.


If the district is to be divided, he urged the government that this huge city, which has offices like Nadakacheri and Divisional Officer's office since the British era, should become our Bailahongala district.
  Leaders Rudrappa Hosmani, Mahantesh Turamari, Raju Janmatti spoke. Bailahongala said that important taluks such as Kittur, Soudatti, Ramadurga, Yaragatti, which have a history since ancient times, and the office of divisional officer for these taluks since pre-independence. Prabhu Neelakanta Swamiji of Three Thousand Mutt, BB Ganachari of Mantesh Mattikoppa Ganachari Educational Institution, etc. were present, Babusab Sutagatti of Srishail Sharanappanavar Chandrasekhara Koppa offered salutations.

 Report : Bylahongala by Mahantesh S. Mudakana Gowda

Post a Comment

Previous Post Next Post
Focus News 18

Contact Form