Focus News 18

MYSURU - ಹಂಸಲೇಖ ಅವರಿಂದ ಈ ಬಾರಿ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ ಘೋಷಣೆ

 


ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಉದ್ಘಾಟನೆ ಮಾಡಲಿದ್ದಾರೆ.

ಈ ಕುರಿತು ಇಂದು ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದಾರೆ.

ಮೈಸೂರು ದಸರಾ ಹಿನ್ನೆಲೆ 2023ರ ಗಜಪಯಣ ಸೆಪ್ಟೆಂಬರ್ 1ಕ್ಕೆ ನಡೆಯಲಿದ್ದು, ಗಜ ಪಡೆಯ ಮೊದಲ ತಂಡ ಸೆಪ್ಟೆಂಬರ್ 1ಕ್ಕೆ ಮೈಸೂರಿಗೆ ಆಗಮಿಸಲಿವೆ.

ಈ ಬಾರಿಯ ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್​ 15 ರ ಬೆಳಿಗ್ಗೆ 10.15 ರಿಂದ 10.30ರ ನಡುವೆ ಮೈಸೂರು ದಸರಾ ಉದ್ಘಾಟನೆ ನೆರವೇರಲಿದ್ದು, ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ.

ಈ ಬಾರಿ ದೀಪಾಲಂಕಾರ, ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಲಿದೆ ಎಂದು ತಿಳಿದು ಬಂದಿದೆ.

This time the famous music director Hamsalekha will inaugurate the world famous Mysore Dussehra festival.

Talking about this today at Chamundi Hill, Chief Minister Siddaramaiah said that famous music director Hamsalekha will inaugurate the Dussehra festival this time.

Mysore Dussehra Background Gajapayan 2023 will be held on September 1, and the first team of Gaja Shot will arrive in Mysore on September 1.

The government has decided to celebrate this Dussehra festival in a grand manner. The inauguration of Mysore Dussehra will be held on October 15 between 10.15 am to 10.30 am and the Panjina parade will be held on Vijayadashami day. Cultural programs, film festival, farmer's Dussehra, youth Dussehra are all planned to be organized systematically.

Post a Comment

Previous Post Next Post
Focus News 18

Contact Form