Focus News 18

New Delhi - Gaming Tax: ಪೂರ್ಣ ಬೆಟ್ಟಿಂಗ್ ಮೌಲ್ಯ ಮತ್ತು ಬಹುಮಾನಕ್ಕೆ ಜಿಎಸ್​ಟಿ ಇಲ್ಲ; ಗೇಮಿಂಗ್ ಕಂಪನಿಗಳು ನಿಟ್ಟುಸಿರು

51st GST Council Meeting: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಆಗಸ್ಟ್ 2ರಂದು ನಡೆದ 51ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಆನ್ಲೈನ್ ಗೇಮಿಂಗ್ ಉದ್ಯಮದ ಆತಂಕ ನಿವಾರಿಸುವ ಪ್ರಯತ್ನ ನಡೆಯಿತು.
ನವದೆಹಲಿ, ಆಗಸ್ಟ್ 3: ಸರಕು ಮತ್ತು ಸೇವಾ ತೆರಿಗೆ ಮಂಡಳಿ (GST Council) ಆನ್​ಲೈನ್ ಗೇಮ್​ಗಳು, ಜೂಜು ಮತ್ತು ಕುದುರೆ ರೇಸ್ ಇತ್ಯಾದಿ ಅದೃಷ್ಟದಾಟಗಳಿಗೆ ಶೇ. 28ರಷ್ಟು ಜಿಎಸ್​ಟಿ ವಿಧಿಸುವುದನ್ನು ಹಿಂಪಡೆಯದಿರಲು ನಿರ್ಧರಿಸಿವೆ. ಅಕ್ಟೋಬರ್ 1ರಂದು ಆನ್​ಲೈನ್ ಗೇಮಿಂಗ್​ಗೆ ನೂತನ ಜಿಎಸ್​ಟಿ ದರವನ್ನು ಜಾರಿಗೊಳಿಸಲು ಆಗಸ್ಟ್ 2ರಂದು ನಡೆದ ಜಿಎಸ್​ಟಿ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಈ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಆನ್​ಲೈನ್ ಗೇಮಿಂಗ್​ಗೆ ಅಕ್ಟೋಬರ್ 1ರಿಂದ ಶೇ. 28ರಷ್ಟು ಜಿಎಸ್​ಟಿ ವಿಧಿಸಲಾಗುವುದು. ಅದಾಗಿ 6 ತಿಂಗಳ ಬಳಿಕ ಪರಾಮರ್ಶಿಸಲಾಗುವುದು ಎಂದು ತಿಳಿಸಿದ್ದಾರೆ


ಬಹುಮಾನ ಹಣಕ್ಕೆ ಜಿಎಸ್​ಟಿ ಇಲ್ಲ; ಗೇಮಿಂಗ್ ಉದ್ಯಮ ನಿರಾಳ
ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನವು ಆನ್​ಲೈನ್ ಗೇಮಿಂಗ್ ಉದ್ಯಮ ನಿಟ್ಟುಸಿರು ಬಿಡುವಂತೆ ಮಾಡಿದೆ. ಆನ್​ಲೈನ್ ಗೇಮಿಂಗ್ ಮತ್ತು ಕ್ಯಾಸಿನೋದಲ್ಲಿ ಆಟಗಾರ ಗೆದ್ದ ಹಣಕ್ಕೆ ಶೇ. 28ರಷ್ಟು ಜಿಎಸ್​ಟಿ ವಿಧಿಸುವ ಪ್ರಸ್ತಾಪವನ್ನು ಮಂಡಳಿ ಕೈಬಿಟ್ಟಿದೆ. ಹಾಗೆಯೇ, ಹಿಂದಿನ ಜಿಎಸ್​ಟಿ ಸಭೆಯಲ್ಲಿ ತೀರ್ಮಾನಿಸಲಾದಂತೆ ಆಟಗಾರನ ಬೆಟ್ಟಿಂಗ್​ನ ಪೂರ್ಣ ಮೌಲ್ಯಕ್ಕೆ ತೆರಿಗೆ ವಿಧಿಸುವ ಪ್ರಸ್ತಾಪವನ್ನೂ ಕೈಬಿಡಲಾಗಿದೆ. ಅದರ ಬದಲು, ಆನ್​ಲೈನ್ ಗೇಮಿಂಗ್ ಮತ್ತು ಕ್ಯಾಸಿನೋದಲ್ಲಿ ಆರಂಭಿಕ ಬೆಟ್ಟಿಂಗ್ ಹಣಕ್ಕೆ ಮಾತ್ರ ಜಿಎಸ್​ಟಿ ವಿಧಿಸಲು ನಿರ್ಧರಿಸಲಾಗಿದೆ. ಅಂದರೆ, ಮೊದಲ ಬೆಟ್ಟಿಂಗ್ ಮೊತ್ತಕ್ಕೆ ಮಾತ್ರ ತೆರಿಗೆ ಇರುತ್ತದೆ. ಆಟ ಮುಂದುವರಿಸಿ ಇನ್ನಷ್ಟು ಬೆಟ್ಟಿಂಗ್​ಗಳನ್ನು ಕಟ್ಟಿದರೆ ಅದಕ್ಕೆ ತೆರಿಗೆ ಇರುವುದಿಲ್ಲ.

ನಿನ್ನೆ ನಡೆದ 51ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಬಹುತೇಕ ಎಲ್ಲಾ ರಾಜ್ಯಗಳೂ ಪಾಲ್ಗೊಂಡಿದ್ದವು. ಆನ್ಲೈನ್ ಗೇಮಿಂಗ್​ಗೆ ಶೇ. 28ರಷ್ಟು ಜಿಎಸ್​ಟಿ ವಿಧಿಸುವ ಪ್ರಸ್ತಾಪವನ್ನು ಮರುಪರಿಶೀಲಿಸಬೇಕೆಂದು ದೆಹಲಿ, ಗೋವಾ ಮತ್ತು ಸಿಕ್ಕಿಂ ಒತ್ತಾಯಿಸಿವೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿನೀಡಿದ್ದಾರೆ.

Post a Comment

Previous Post Next Post
Focus News 18

Contact Form