Focus News 18

Odissa - ಕರೆಂಟ್ ಬಿಲ್ ಜಾಸ್ತಿ ಬಂತೆಂದು ಮೀಟರ್ ರೀಡರ್ ನನ್ನೇ ಕೊಂದ ಹಂತಕರು !

 

ಗಂಜಾಂ: ಅಧಿಕ ಪ್ರಮಾಣದ ಬಿಲ್ ನೀಡುತ್ತಿದ್ದಾನೆ ಎಂಬ ಆರೋಪದ ಮೇಲೆ ವಿದ್ಯುತ್ ಮೀಟರ್ ರೀಡರ್ ನನ್ನೇ ಹರಿತವಾದ ಆಯುಧಗಳಿಂದ ಇರಿದು ಹತ್ಯೆ ಮಾಡಿ ಹಂತಕರು ಪಾರಾರಿಯಾದ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ.

ಲಕ್ಷ್ಮೀ ನಾರಾಯಣ ತ್ರಿಪಾಠಿ ಮೃತ ವ್ಯಕ್ತಿ. ಹಲವು ವರ್ಷಗಳಿಂದ ಇವರು ವಿದ್ಯುತ್ ಬಿಲ್ ರೀಡರ್ ಆಗಿ ಕೆಲಸ ಮಾಡುತ್ತಿದ್ದರು. ಪ್ರತಿ ತಿಂಗಳು ತನ್ನ ವ್ಯಾಪ್ತಿಯಲ್ಲಿ ಬರುತ್ತಿದ್ದ ಮನೆಗಳಿಗೆ ವಿದ್ಯುತ್ ಬಿಲ್ ವಿತರಿಸುತ್ತಿದ್ದರು. ಆದರೆ ಕೆಲವು ಜನರು ವಿದ್ಯುತ್ ಬಿಲ್ ಪ್ರತಿ ತಿಂಗಳು ಹೆಚ್ಚಾಗಿ ಬರುತ್ತಿದ್ದುದ್ದಕ್ಕೆ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಹಲವು ಬಾರಿ ರೀಡರ್ ಲಕ್ಷ್ಮೀ ನಾರಾಯಣ ತ್ರಿಪಾಠಿ ಜೊತೆಗೆ ವಾಗ್ವಾದವನ್ನೂ ನಡೆಸಿದ್ದರು.

ಆದರೂ ವಿದ್ಯುತ್ ಬಿಲ್ ಅಧಿಕವಾಗಿಯೇ ಬರುತ್ತಿತ್ತು. ಎಂದಿನಂತೆ ರೀಡರ್ ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರು ಸೋಮವಾರ (ಆಗಸ್ಟ್ 7) ವಿದ್ಯುತ್ ಬಿಲ್ ನೀಡಲು ಕುಪಾಟಿ ಗ್ರಾಮಕ್ಕೆ ತೆರಳಿದ್ದಾರೆ. ಈ ವೇಳೆ ಕೆಲ ದುಷ್ಕರ್ಮಿಗಳು ತ್ರಿಪಾಠಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಹರಿತವಾದ ಆಯುಧ ಬಳಸಿ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಮನೆಯೊಂದರ ಮುಂದೆ ಅವರು ಸಾವನ್ನಪ್ಪಿದ್ದಾರೆ.


Post a Comment

Previous Post Next Post
Focus News 18

Contact Form